ಕೊರೊನ ವೈರಸ್ ವಿರುದ್ಧದ ಹೋರಾಟಕ್ಕೆ ಉಳಿತಾಯ ಹಣ ದೇಣಿಗೆ ನೀಡಿದ ಮಕ್ಕಳು

Update: 2020-04-01 18:02 GMT
photo: twitter 

ಹೊಸದಿಲ್ಲಿ, ಎ.1: ಉದ್ಯಮಿಗಳು, ಸೆಲೆಬ್ರಿಟಿಗಳು ಭಾರೀ ಮೊತ್ತದ ದೇಣಿಗೆ ನೀಡಿ ಕೊರೊನ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವ ಮಧ್ಯೆ, ಮಕ್ಕಳೂ ತಾವು ಗೋಲಕದಲ್ಲಿ (ಪಿಗ್ಗಿ ಬ್ಯಾಂಕ್) ಉಳಿಸಿದ ಹಣವನ್ನು ದೇಣಿಗೆಯಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಮಿಝೊರಾಂನ 7 ವರ್ಷದ ಬಾಲಕ ತಾನು ಉಳಿಸಿದ ಹಣವನ್ನೆಲ್ಲಾ ಕೊರೊನ ವೈರಸ್ ವಿರುದ್ಧದ ಹೋರಾಟ ನಿಧಿಗೆ ದೇಣಿಗೆ ನೀಡಿರುವ ವರದಿಯನ್ನು ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.

ಇನ್ನೊಂದು ಘಟನೆಯಲ್ಲಿ, 6 ವರ್ಷದ ಬಾಲಕನೊಬ್ಬ ತನ್ನ ಪಿಗ್ಗಿ ಬ್ಯಾಂಕ್‌ನಲ್ಲಿ ಉಳಿಸಿದ್ದ ಹಣವನ್ನು ದೇಣಿಗೆಯಾಗಿ ನೀಡುತ್ತಿರುವ ವೀಡಿಯೊ ವೈರಲ್ ಆಗಿದೆ. ಪೊಲೀಸ್ ಠಾಣೆಯಲ್ಲಿ ಈ ಬಾಲಕ ನೀಡಿದ ನಾಣ್ಯಗಳನ್ನು ಕಾನ್‌ಸ್ಟೇಬಲ್ ಒಬ್ಬ ಲೆಕ್ಕ ಹಾಕುತ್ತಿರುವ ಮತ್ತು ಇನ್ನೊಬ್ಬ ಪೊಲೀಸ್ ಬಾಲಕನ ಹೆಸರು, ವಿಳಾಸ ಮತ್ತು ದೇಣಿಗೆ ನೀಡುವ ಕಾರಣವನ್ನು ನಮೂದಿಸುವ 29 ಸೆಕೆಂಡ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News