ಕಾರ್ಮಿಕರು ನಿಜವಾದ ಬಡವರಲ್ಲ: ಉಮಾಭಾರತಿ ಟ್ವೀಟ್

Update: 2020-04-01 18:22 GMT

ಹೊಸದಿಲ್ಲಿ, ಎ.1: ಕೊರೋನ ವೈರಸ್ ಲಾಕ್‌ಡೌನ್‌ನಿಂದ ಕಂಗೆಟ್ಟು ತಮ್ಮ ಊರಿನತ್ತ ದೌಡಾಯಿಸುತ್ತಿರುವ ವಲಸೆ ಕಾರ್ಮಿಕರು ನಿಜವಾದ ಬಡವರಲ್ಲ. ಶ್ರೀಮಂತರಾಗಿದ್ದೂ ಮಧುಮೇಹ, ಹೃದಯದ ಕಾಯಿಲೆ ಮುಂತಾದ ಸಮಸ್ಯೆಗಳಿಂದ ಏನನ್ನೂ ತಿನ್ನಲಾಗದೆ ಪರಿತಪಿಸುತ್ತಿರುವವರು ನಿಜವಾದ ಬಡವರು ಎಂದು ಬಿಜೆಪಿಯ ನಾಯಕಿ ಉಮಾ ಭಾರತಿ ವ್ಯಾಖ್ಯಾನಿಸಿದ್ದಾರೆ.

ಉಮಾಭಾರತಿ ಬಡವರ ಕುರಿತು ಟ್ವಿಟರ್‌ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ. ಕೋಟ್ಯಾಧಿಪತಿಗಳಾಗಿದ್ದರೂ ಹಣದ ವ್ಯಾಮೋಹ ಕುಗ್ಗದೆ ಇರುವವರು, ಭ್ರಷ್ಟ ರಾಜಕಾರಣಿಗಳು, ವರದಕ್ಷಿಣೆಗೆ ಬೇಡಿಕೆ ಇಡುವವರು, ಭಾರೀ ವೇತನ ಪಡೆಯುತ್ತಿದ್ದರೂ ಲಂಚಕ್ಕೆ ಕೈಯೊಡ್ಡುವವರು ನಿಜವಾದ ಬಡವರು ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಕಾರ್ಮಿಕರನ್ನು ಬಡವರು ಎಂದು ಕರೆಯಬಾರದು. ಅವರನ್ನು ಶ್ರಮಜೀವಿಗಳು ಎನ್ನಬೇಕು. ರಸ್ತೆಗಳನ್ನು, ವಿದ್ಯುಚ್ಛಕ್ತಿಯನ್ನು, ಮನೆಯನ್ನು ನಿರ್ಮಿಸಿದವರು, ಇಡೀ ವಿಶ್ವವನ್ನು ನಿರ್ಮಿಸಿದವರು ಕಾರ್ಮಿಕರು ಎಂದು ಉಮಾಭಾರತಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News