ಸಿಂಗಾಪುರ: ‘ಕೊರೋನ’ ಎಂದು ಕೂಗಿದ ಭಾರತ ಮೂಲದವನಿಗೆ 2 ತಿಂಗಳು ಜೈಲು

Update: 2020-04-02 16:51 GMT

ಸಿಂಗಾಪುರ, ಎ. 2: ಸಿಂಗಾಪುರದ ಚಂಗಿ ವಿಮಾನ ನಿಲ್ದಾಣದಲ್ಲಿರುವ ಹೊಟೇಲ್‌ನಲ್ಲಿ ‘ಕೊರೋನ, ಕೊರೋನ’ ಎಂದು ಕೂಗಿ ನೆಲಕ್ಕೆ ಉಗುಳಿದ ಭಾರತ ಮೂಲದ ಸಿಂಗಾಪುರ ಪ್ರಜೆಯೊಬ್ಬನಿಗೆ ಗುರುವಾರ ಎರಡು ತಿಂಗಳ ಜೈಲುವಾಸದ ಶಿಕ್ಷೆ ವಿಧಿಸಲಾಗಿದೆ. ಸಿಂಗಾಪುರದಲ್ಲಿ ಕೊರೋನವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿ ಆರೋಪಿಯೊಬ್ಬನ ಆರೋಪ ಸಾಬೀತಾದ ಮೊದಲ ಪ್ರಕರಣ ಇದಾಗಿದೆ.

52 ವರ್ಷದ ಜಸ್ವಿಂದರ್ ಸಿಂಗ್ ಮೆಹರ್, ಮಾರ್ಚ್ 3ರಂದು ನಡೆದ ಪ್ರಕರಣದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ‘ದ ಸ್ಟ್ರೇಟ್ಸ್ ಟೈಮ್ಸ್’ ವರದಿ ಮಾಡಿದೆ.

ಕ್ರೌನ್ ಪ್ಲಾಝಾ ಚಂಗಿ ವಿಮಾನ ನಿಲ್ದಾಣದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಊಟ ಮುಗಿದಿದೆ ಎಂಬುದಾಗಿ ವೇಟ್ರೆಸ್ ತಿಳಿಸಿದಾಗ ಸಿಂಗ್ ಪ್ಲೇಟೊಂದನ್ನು ಒಡೆದು ನೆಲದ ಮೇಲೆ ಉಗಿದನು ಎಂದು ಆರೋಪಿಸಲಾಗಿದೆ.

ಅಷ್ಟಕ್ಕೂ ಸಮಾಧಾನಗೊಳ್ಳದ ಸಿಂಗ್, ನೆಲದ ಮೇಲೆ ಮತ್ತೆ ಎರಡು ಸಲ ಉಗುಳಿ, ‘ಕೊರೋನ, ಕೊರೋನ’ ಎಂದು ಚೀರಿದನು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News