ಅಮೆರಿಕ: ಮತ್ತೆ 884 ಸಾವು

Update: 2020-04-02 16:59 GMT

ವಾಶಿಂಗ್ಟನ್, ಎ. 2: ಅಮೆರಿಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ನೂತನ-ಕೊರೋನವೈರಸ್‌ನಿಂದಾಗಿ 884 ಮಂದಿ ಮೃತಪಟ್ಟಿದ್ದಾರೆ. ಇದು ಅಮೆರಿಕದ ಒಂದು ದಿನದ ದಾಖಲೆಯಾಗಿದೆ.

ಇದರೊಂದಿಗೆ ಅಮೆರಿಕದಲ್ಲಿ ಕೊರೋನವೈರಸ್‌ನಿಂದಾಗಿ ಪ್ರಾಣ ಕಳೆದುಕೊಂಡವರ ಸತ್ತವರ ಸಂಖ್ಯೆ ಬುಧವಾರ 5,116ನ್ನು ತಲುಪಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿ-ಸಂಖ್ಯೆಗಳು ಹೇಳಿವೆ.

ಅಮೆರಿಕದ ಸಾವಿನ ಸಂಖ್ಯೆಯು ಇಟಲಿ ಮತ್ತು ಸ್ಪೇನ್‌ಗಳಲ್ಲಿ ದಾಖಲಾಗಿರುವ ಸಾವಿನ ಸಂಖ್ಯೆಗಿಂತ ಹೆಚ್ಚಾಗಿದೆ. ಆದರೆ, ಚೀನಾದ ಅಧಿಕೃತ ಸಾವಿನ ಸಂಖ್ಯೆಗಿಂತ ಹೆಚ್ಚಾಗಿದೆ.

ಅಮೆರಿಕದಲ್ಲಿ ದಾಖಲಾಗಿರುವ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 2,15,417ಕ್ಕೆ ಏರಿದೆ ಹಾಗೂ ಇದು ಜಾಗತಿಕ ದಾಖಲೆಯಾಗಿದೆ.

6 ವಾರಗಳ ಶಿಶು ಕೊರೋನಗೆ ಬಲಿ

ಅಮೆರಿಕದ ಕನೆಕ್ಟಿಕಟ್ ರಾಜ್ಯದಲ್ಲಿ ಆರು ವಾರಗಳ ಶಿಶುವೊಂದು ನೋವೆಲ್-ಕೊರೋನವೈರಸ್ ಕಾಯಿಲೆಗೆ ಬಲಿಯಾಗಿದೆ. ಈ ಮಗುವನ್ನು ಕಳೆದ ವಾರಾಂತ್ಯದಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಮಗುವಿನಲ್ಲಿ ಸೋಂಕು ಇರುವುದು ಮಂಗಳವಾರ ಪತ್ತೆಯಾಗಿತ್ತು.

ಕೊರೋನವೈರಸ್ ಸೋಂಕು ವೃದ್ಧರನ್ನು ಮತ್ತು ಈಗಾಗಲೇ ಇತರ ರೋಗಗಳಿಂದ ಬಳಲುತ್ತಿರುವವರನ್ನು ಹೆಚ್ಚು ಕಾಡುತ್ತದೆ. ಆದರೆ, ಎಲ್ಲ ವಯೋಗುಂಪಿನ ಜನರ ಮೇಲೆಯೂ ಅದು ಗಂಭೀರ ಪರಿಣಾಮ ಬೀರಬಹುದು ಎನ್ನುವುದನ್ನು ಇತ್ತೀಚಿನ ಹಲವು ಪ್ರಕರಣಗಳು ಸಾಬೀತುಪಡಿಸಿವೆ.

ಫ್ರಾನ್ಸ್‌ನಲ್ಲಿ 13 ವರ್ಷದ, ಬೆಲ್ಜಿಯಮ್‌ನಲ್ಲಿ 12 ವರ್ಷದ ಮತ್ತು ಬ್ರಿಟನ್‌ನಲ್ಲಿ 13 ವರ್ಷದ ಮಕ್ಕಳು ನೂತನ-ಕೊರೋನವೈರಸ್‌ಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News