ಕೊರೋನ ವೈರಸ್: ವಿಮಾನಯಾನ ಪುನರಾರಂಭದ ಬಗ್ಗೆ ಎ.15ರ ಬಳಿಕವೇ ಕೇಂದ್ರದ ನಿರ್ಧಾರ

Update: 2020-04-03 17:49 GMT

ಹೊಸದಿಲ್ಲಿ, ಎ.3: ಲಾಕ್‌ಡೌನ್ ಅವಧಿ ಎ.14ರಂದು ಅಂತ್ಯಗೊಂಡ ಬಳಿಕ ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸುವ ಬಗ್ಗೆ ಸರಕಾರವು ಇನ್ನಷ್ಟೇ ನಿರ್ಧಾರವನ್ನು ಕೈಗೊಳ್ಳಬೇಕಿದೆ ಎಂದು ನಾಗರಿಕ ವಾಯುಯಾನ ಸಚಿವ ಹರ್ದೀಪಸಿಂಗ್ ಪುರಿ ಅವರು ಹೇಳಿದ್ದಾರೆ.

‘ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳ ಮೇಲಿನ ಹಾಲಿ ನಿಷೇಧದ ಅವಧಿಯು ಎ.14ರವರೆಗಿದೆ. ನಂತರ ವಿಮಾನಯಾನಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ. ಪ್ರತಿಯೊಂದನ್ನೂ ಕೂಲಂಕಶವಾಗಿ ಪರಿಶೀಲಿಸಿಯೇ ಪರಿಸ್ಥಿತಿಯ ವೌಲ್ಯಮಾಪನವನ್ನು ನಡೆಸಬೇಕಾಗುತ್ತದೆ ’ ಎಂದು ಪುರಿ ಟ್ವೀಟಿಸಿದ್ದಾರೆ.

ವಿಮಾನಯಾನ ಸಂಸ್ಥೆಗಳು ತಮ್ಮ ವಿವೇಚನೆಯ ಮೇರೆಗೆ ಮುಂಗಡ ಬುಕಿಂಗ್ ಆರಂಭಿಸಬಹುದು,ಆದರೆ ಈ ಸಂಬಂಧ ಸರಕಾರವು ಯಾವುದೇ ನಿರ್ದೇಶವನ್ನು ಹೊರಡಿಸಿಲ್ಲ. ವಿಮಾನಯಾನ ಸಂಸ್ಥೆಗಳು ತಮ್ಮ ತುರ್ತು ಸಂದರ್ಭ ಯೋಜನೆಯ ಭಾಗವಾಗಿ ಏನನ್ನು ಮಾಡಬೇಕು ಮತ್ತು ಭವಿಷ್ಯಕ್ಕೆ ಹೇಗೆ ಸಜ್ಜಾಗಬೇಕು ಎನ್ನುವುದು ಸಂಪೂರ್ಣವಾಗಿ ಅವುಗಳಿಗೇ ಬಿಟ್ಟ ವಿಷಯವಾಗಿದೆ ಎಂದು ಸಚಿವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಎ.15ರಿಂದ ವಿಮಾನಯಾನಗಳು ಪುನರಾರಂಭಗೊಳ್ಳುತ್ತವೆ ಎಂಬ ಆಶಯವನ್ನು ಪುರಿ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News