ಕೊರೋನ ವೈರಸ್: ದೇಶದಲ್ಲಿ 24 ಗಂಟೆಗಳಲ್ಲಿ 601 ಪ್ರಕರಣಗಳು ದೃಢ

Update: 2020-04-04 12:31 GMT

ಹೊಸದಿಲ್ಲಿ: ದೇಶದಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2902ಕ್ಕೇರಿದ್ದು, 68 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

24 ಗಂಟೆಗಳಲ್ಲಿ ದೇಶದಲ್ಲಿ 601 ಪ್ರಕರಣಗಳು ದೃಢಪಟ್ಟಿದ್ದು, ಇದು ಗರಿಷ್ಠ ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 19 ಮಂದಿ, ಗುಜರಾತ್ ನಲ್ಲಿ 9, ತೆಲಂಗಾಣ 7, ಮಧ್ಯಪ್ರದೇಶ 6, ದಿಲ್ಲಿ 6, ಪಂಜಾಬ್ 5, ಕರ್ನಾಟಕ 3, ಪಶ್ಚಿಮ ಬಂಗಾಳ 3, ಜಮ್ಮು ಮತ್ತು ಕಾಶ್ಮೀರ 2, ಉತ್ತರ ಪ್ರದೇಶ 2 ಮತ್ತು ಕೇರಳದಲ್ಲಿ  ಇಬ್ಬರು ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News