ಸರಕಾರದ ಕ್ರಮಗಳನ್ನು ಮಾಧ್ಯಮದಲ್ಲಿ ಟೀಕಿಸಿದರೆ ಕಠಿಣ ಕ್ರಮ: ಕಾಶ್ಮೀರದ ವೈದ್ಯರಿಗೆ ಎಚ್ಚರಿಕೆ

Update: 2020-04-04 16:45 GMT

ಶ್ರೀನಗರ, ಎ.4: ಕಾಶ್ಮೀರದ ವೈದ್ಯರು ಕೊರೋನ ವೈರಸ್ ಸೋಂಕು ಹರಡದಂತೆ ಸರಕಾರ ಕೈಗೊಂಡಿರುವ ಪ್ರತಿಬಂಧಕ ಕ್ರಮಗಳನ್ನು ಟೀಕಿಸಿ ಮಾಧ್ಯಮದಲ್ಲಿ ಹೇಳಿಕೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದೆ.

ಕಾಶ್ಮೀರದ ಆರೋಗ್ಯ ಸೇವಾ ಪ್ರಾಧಿಕಾರ ಎಪ್ರಿಲ್ 1ರಂದು ಹೊರಡಿಸಿರುವ ಸುತ್ತೋಲೆಯಲ್ಲಿ, ಕೊರೋನ ಸೋಂಕು ನಿಯಂತ್ರಣಕ್ಕೆ ಸರಕಾರ ನಡೆಸುತ್ತಿರುವ ಪ್ರಯತ್ನದ ವಿರುದ್ಧ ವೈದ್ಯರು ಮಾಧ್ಯಮದಲ್ಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದರೆ 6 ತಿಂಗಳು ಜೈಲುಶಿಕ್ಷೆಯ ಸಹಿತ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಕೆಲವು ಸಿಬ್ಬಂದಿಗಳು ಸರಕಾರದ ಕ್ರಮಗಳ ಬಗ್ಗೆ ಸಾರ್ವಜನಿಕವಾಗಿ ಟೀಕಿಸುತ್ತಿರುವುದು ಗಮನಕ್ಕೆ ಬಂದಿದ್ದು ಇದು ಸೇವಾ ನಡವಳಿಕೆ ನಿಯಮದ ವಿರುದ್ಧವಾಗಿದೆ. ಆದ್ದರಿಂದ ಈ ಅಪರಾಧ ಮಾಡಿದವರ ವಿರುದ್ಧ ಐಪಿಸಿ ಸೆಕ್ಷನ್ 188ರಡಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ. ಸರಕಾರಿ ಸಿಬ್ಬಂದಿಗೆ ಸೂಚಿಸಲಾದ ಆದೇಶಗಳಿಗೆ ಅಸಹಕಾರ ನೀಡುವ ಅಪರಾಧಕ್ಕೆ ಈ ಸೆಕ್ಷನ್ ಅನ್ವಯಿಸುತ್ತದೆ ಮತ್ತು ಈ ಅಪರಾಧಕ್ಕೆ 6 ತಿಂಗಳ ಜೈಲುಶಿಕ್ಷೆ ಅಥವಾ 1 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News