ಆಸ್ಟ್ರೇಲಿಯದ ಕ್ವಾಂಟಾಸ್ ವಿಮಾನಸಂಸ್ಥೆಯ 50 ಸಿಬ್ಬಂದಿಗೂ ಕೊರೋನ ಸೋಂಕು

Update: 2020-04-04 17:33 GMT
ಸಾಂದರ್ಭಿಕ ಚಿತ್ರ

ಕ್ಯಾನ್‌ಬೆರ್ರಾ, ಎ.4: ಜಗತ್ತಿನಾದ್ಯಂತ ಕೊರೋನ ವೈರಸ್‌ನ ಅಟ್ಟಹಾಸ ಮುಂದುವರಿದಿರುವಂತೆಯೇ, ಆಸ್ಟ್ರೇಲಿಯದ ವಾಯುಯಾನ ಸಂಸ್ಥೆ ಕ್ವಾಂಟಾಸ್ ಹಾಗೂ ಅದರ ಅಂಗಸಂಸ್ಥೆಯಾದ ಜೆಟ್‌ಸ್ಟಾರ್‌ನ 50 ಮಂದಿ ಸಿಬ್ಬಂದಿಗೂ ಸೋಂಕು ತಗಲಿರುವುದು ದೃಢಪಟ್ಟಿದೆಯೆಂದು ಕಂಪೆನಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಸೋಂಕಿಗೊಳಗಾದವರಲ್ಲಿ ಎಂಟು ಮಂದಿ ಪೈಲಟ್‌ಗಳು ಹಾಗೂ 19 ಮಂದಿ ವಿಮಾನಸಿಬ್ಬಂದಿಯಿದ್ದಾರೆಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ ಆದಾಗ್ಯೂ ವಿಮಾನಗಳಲ್ಲಿದ್ದ ಸಿಬ್ಬಂದಿಯಿಂದ ಪ್ರಯಾಣಿಕರಿಗೆ ಸೋಂಕುತಗಲಿರುವ ಬಗ್ಗೆ ಯಾವುದೇ ಪುರಾವೆಗಳು ಲಭಿಸಿಲ್ಲ. ಆದರೆ ಆ ಸಾಧ್ಯತೆಯನ್ನು ಅಲ್ಲಗೆಳೆಯಲಾರದು ಎಂದು ಕ್ವಾಂಟಾಸ್‌ನ ವೈದ್ಯಕೀಯ ನಿರ್ದೇಶಕ ಇಯಾನ್ ಹೊಸ್‌ಗೂಡ್ ತಿಳಿಸಿದ್ದಾರೆ.

ಬಹುತೇಕ ಪ್ರಕರಣಗಳಲ್ಲಿ, ವಿಮಾನಯಾನ ಸಿಬ್ಬಂದಿ ಸೇರಿದಂತೆ ಸಂಸ್ಥೆಗಳ ಉದ್ಯೋಗಿಗಳು ವಿದೇಶಗಳಲ್ಲಿ ರಜಾಪ್ರವಾಸದಲ್ಲಿದ್ದಾಗ ಸೋಂಕು ಪೀಡಿತರಾಗಿದ್ದಾರೆಂದು ಹೊಸ್‌ಗೂಡ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News