ಕೊರೋನ ಎಫೆಕ್ಟ್: ದಿಲ್ಲಿ ಶೂಟಿಂಗ್ ವಿಶ್ವಕಪ್ ರದ್ದು

Update: 2020-04-07 04:54 GMT

ಹೊಸದಿಲ್ಲಿ, ಎ.6: ಕೋವಿಡ್-19 ಪಿಡುಗಿನ ಕಾರಣಕ್ಕೆ ಈ ವರ್ಷದ ಮೇ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಿಗದಿಯಾಗಿದ್ದ ಶೂಟಿಂಗ್ ವಿಶ್ವಕಪ್‌ನ್ನು ರದ್ದುಪಡಿಸಲು ಸೋಮವಾರ ನಿರ್ಧರಿಸಲಾಗಿದೆ.

ಶೂಟಿಂಗ್ ವಿಶ್ವಕಪ್ ಮೂಲತಃ ಮಾ.15ರಿಂದ 26ರ ತನಕ ನಡೆಯಬೇಕಾಗಿತ್ತು. ಶೂಟಿಂಗ್ ಸ್ಪರ್ಧೆ ಆರಂಭವಾಗಲು ನಾಲ್ಕು ದಿನಗಳು ಬಾಕಿ ಇರುವಾಗ ಮೇ ತಿಂಗಳಿಗೆ ಸ್ಪರ್ಧೆಯನ್ನು ಮುಂದೂಡಲು ನಿರ್ಧರಿಸಲಾಗಿತ್ತು.

 ಕೋವಿಡ್-19 ಪಿಡುಗಿನ ಕಾರಣಕ್ಕೆ ಹೊಸದಿಲ್ಲಿ ಶೂಟಿಂಗ್ ಸ್ಪರ್ಧೆಯ ಸಂಘಟನ ಸಮಿತಿಯು ರೈಫಲ್/ಪಿಸ್ತೂಲ್ ಹಾಗೂ ಶಾಟ್‌ಗನ್ ವಿಶ್ವಕಪ್‌ನ್ನು ರದ್ದುಪಡಿಸಿದೆ. ಈ ಎರಡು ಸ್ಪರ್ಧೆಯು ಹೊಸದಿಲ್ಲಿಯಲ್ಲಿ ನಡೆಯಬೇಕಾಗಿತ್ತು ಎಂದು ಶೂಟಿಂಗ್ ಕ್ರೀಡಾ ಆಡಳಿತ ಮಂಡಳಿ ಐಎಸ್‌ಎಎಸ್‌ಎಫ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಶೂಟಿಂಗ್ ವಿಶ್ವಕಪ್‌ನ್ನು ಎರಡು ಭಾಗಗಳಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ರೈಫಲ್ ಹಾಗೂ ಪಿಸ್ತೂಲ್ ಸ್ಪರ್ಧಾವಳಿಯನ್ನು ಮೇ 5ರಿಂದ 12ರ ತನಕ ಹಾಗೂ ಶಾಟ್‌ಗನ್ ಸ್ಪರ್ಧಾವಳಿಯನ್ನು ಜೂ.2ರಿಂದ 9ರ ತನಕ ಆಯೋಜಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಅಂತರ್‌ರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್(ಐಎಸ್‌ಎಸ್‌ಎಫ್)ಟೂರ್ನಮೆಂಟ್‌ನ್ನು ರದ್ದುಪಡಿಸಲು ನಿರ್ಧರಿಸಿದೆ. ರಾಷ್ಟ್ರೀಯ ರೈಫಲ್ ಅಸೋಸಿಯೇಶನ್(ಎನ್‌ಆರ್‌ಎಎಐ)ಪ್ರತಿಕೂಲ ಪರಿಸ್ಥಿತಿಯಲ್ಲಿ ಟೂರ್ನಮೆಂಟ್‌ನ್ನು ನಡೆಸಬಾರದೆಂಬ ಒತ್ತಡದಲ್ಲಿದೆ ಎಂದು ಪಿಟಿಐ ಸುದ್ದಿಸಂಸ್ಥೆ ಈ ಹಿಂದೆ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News