ರೋಹಿತ್ ಶರ್ಮಾ ಶ್ರೇಷ್ಠ ಓಪನಿಂಗ್ ಬ್ಯಾಟ್ಸ್ ಮನ್: ಹನುಮ ವಿಹಾರಿ

Update: 2020-04-07 06:14 GMT

ಹೊಸದಿಲ್ಲಿ, ಎ.6: ಕೊರೋನ ವೈರಸ್ ಹಬ್ಬುವ ಭೀತಿಯಲ್ಲಿ ಭಾರತದಲ್ಲಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕ್ರಿಕೆಟಿಗರು ಸೇರಿದಂತೆ ಭಾರತೀಯರು ಮನೆಯೊಳಗೆ ಉಳಿದುಕೊಂಡಿದ್ದಾರೆ. ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಸಾಮಾಜಿಕ ಮಾಧ್ಯಮದಲ್ಲಿ ಕ್ರಿಕೆಟ್ ಅಭಿಮಾನಿಗಳೊಂದಿಗೆ ನೇರ ಟ್ವಿಟರ್ ಚಾಟ್ ನಡೆಸಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಹಾಗೂ ಡೇವಿಡ್ ವಾರ್ನರ್ ಪೈಕಿ ಯಾರು ಉತ್ತಮ ಆರಂಭಿಕ ಬ್ಯಾಟ್ಸ್‌ಮನ್ ಎಂಬ ಪ್ರಶ್ನೆ ಎದುರಾದಾಗ ವಿಹಾರಿ ಮರು ಯೋಚಿಸದೇ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್‌ರನ್ನು ಆಯ್ಕೆ ಮಾಡಿದ್ದಾರೆ.

  ಹನುಮ ವಿಹಾರಿ 2018ರ ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಟೆಸ್ಟ್ ತಂಡದಲ್ಲಿ ಚೊಚ್ಚಲ ಪಂದ್ಯ ಆಡಿದ್ದರು. ಕ್ರಿಕೆಟ್ ಅಭಿಮಾನಿಗಳೊಂದಿಗಿನ ಸಂವಾದದ ವೇಳೆ ವಿಹಾರಿ ತನ್ನ ಕ್ವಾರಂಟೈನ್ ವೇಳಾಪಟ್ಟಿ, ತನ್ನ ನೆಚ್ಚಿನ ಎರಡನೇ ಕ್ರೀಡೆ, ಏಶ್ಯದ ಒಳಗೆ ಹಾಗೂ ಹೊರಗೆ ತಾನೆದುರಿಸಿದ ಕಠಿಣ ಆರಂಭಿಕ ಬ್ಯಾಟ್ಸ್ ಮನ್‌ಗಳ ಬಗ್ಗೆ ಹೇಳಿಕೊಂಡರು. ಡೇವಿಡ್ ವಾರ್ನರ್ ಹಾಗೂ ರೋಹಿತ್ ಶರ್ಮಾರ ಪೈಕಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂಬ ಅಭಿಮಾನಿಯೊಬ್ಬನ ನಿರ್ದಿಷ್ಟ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಹೆಚ್ಚು ಗಮನ ಸೆಳೆಯಿತು.

  ನ್ಯೂಸ್ ವೆಬ್‌ಸೈಟ್‌ಗೆ ಸಂದರ್ಶನ ನೀಡುವ ಮೊದಲು ಹನುಮ ವಿಹಾರಿ ಅವರು ಮುಂಬೈ ಇಂಡಿಯನ್ಸ್ ನಾಯಕನಾಗಿ ರೋಹಿತ್ ತನಗೆ ತುಂಬಿರುವ ಆತ್ಮವಿಶ್ವಾಸ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಯಶಸ್ಸಿಗೆ ಕಾರಣವಾಗಿದ್ದನ್ನು ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News