ಹಿಮಾಚಲ ಪ್ರದೇಶ: ಕೊರೋನ ವೈರಸ್ ಫಂಡಿಗೆ ಸಚಿವರು, ಶಾಸಕರಿಂದ 30% ವೇತನ ದೇಣಿಗೆ

Update: 2020-04-07 17:19 GMT

ಶಿಮ್ಲ, ಎ.7: ಕೇಂದ್ರ ಸರಕಾರದ ಮಾದರಿಯನ್ನು ಅನುಸರಿಸಿರುವ ಹಿಮಾಚಲ ಪ್ರದೇಶದ ಸಚಿವರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಕೊರೊನ ವೈರಸ್ ನಿಧಿಗೆ ಒಂದು ವರ್ಷದ ವೇತನದ 30% ದೇಣಿಗೆ ನೀಡಲು ನಿರ್ಧರಿಸಿದ್ದಾರೆ.

ಅಲ್ಲದೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನವನ್ನು 2 ವರ್ಷ ಸ್ಥಗಿತಗೊಳಿಸಲೂ ರಾಜ್ಯ ಸರಕಾರ ನಿರ್ಧರಿಸಿದೆ. ಈ ಕಡಿತದಿಂದ ಉಳಿತಾಯವಾದ ಹಣವನ್ನು ರಾಜ್ಯದಲ್ಲಿ ಕೊರೋನ ವೈರಸ್ ವಿರುದ್ಧದ ಸಮರಕ್ಕೆ ಮೀಸಲಿರಿಸಿರುವ ಮೂಲಧನಕ್ಕೆ ಸೇರಿಸಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ.

ಸಂಸದರ ವೇತನದಲ್ಲಿ 30% ಕಡಿತ ಮಾಡಿ ಕೊರೋನ ವೈರಸ್ ಫಂಡಿಗೆ ದೇಣಿಗೆ ನೀಡಲು ಸೋಮವಾರ ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಈ ಕ್ರಮ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಎಲ್ಲಾ ರಾಜ್ಯಗಳ ರಾಜ್ಯಪಾಲರು, ಲೋಕಸಭೆಯ ಸ್ಪೀಕರ್‌ಗೂ ಅನ್ವಯಿಸುತ್ತದೆ ಎಂದು ಸರಕಾರ ತಿಳಿಸಿದೆ. ಅಲ್ಲದೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಗೆ ಮುಂದಿನ 2 ವರ್ಷ ಅನುದಾನ ಕಡಿತ ಮಾಡಲೂ ನಿರ್ಧರಿಸಲಾಗಿದ್ದು ಇದರಿಂದ 7,930 ಕೋಟಿ ರೂ. ಉಳಿತಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News