ಆಸ್ಪತ್ರೆ, ಬಸ್ ಸ್ವಚ್ಛಗೊಳಿಸಲು ಎಲ್‌ಇಡಿ ಆಧಾರಿತ ಯಂತ್ರ ಸಿದ್ಧಪಡಿಸಿದ ಐಐಐಟಿ ತಂಡ

Update: 2020-04-07 17:24 GMT

ಹೊಸದಿಲ್ಲಿ, ಎ.7: ಕೊರೋನ ಸೋಂಕು ವಿರುದ್ಧದ ಹೋರಾಟಕ್ಕೆ ಪೂರಕವಾಗಿ, ಆಸ್ಪತ್ರೆಗಳ ನೆಲ, ಬಸ್ ಹಾಗೂ ರೈಲುಗಳನ್ನು ಸ್ವಚ್ಛಗೊಳಿಸಲು ಐಐಟಿಯ ತಂಡ ಕಡಿಮೆ ವೆಚ್ಚದ, ಎಲ್‌ಇಡಿ ಆಧಾರದಿಂದ ಕಾರ್ಯನಿರ್ವಹಿಸುವ ಯಂತ್ರವನ್ನು ಸಿದ್ಧಪಡಿಸಿದೆ.

ಈ ಹಸ್ತಚಾಲಿತ ಯಂತ್ರದ ಬೆಲೆ 1,000 ರೂ. ಆಗಿದ್ದು ಪೇಟೆಂಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ರೊಬೊಟ್‌ಗಳ ನೆರವಿನಿಂದ ಯಂತ್ರದ ಕಾರ್ಯನಿರ್ವಹಣೆಗೆ ಪ್ರಯತ್ನ ಮುಂದುವರಿದಿದೆ. ಆಸ್ಪತ್ರೆ ಮತ್ತು ಬಸ್‌ಗಳಲ್ಲಿ ಬಳಸಲು ಕರ್ನಾಟಕ ಸರಕಾರದ ಕೋರಿಕೆಯಂತೆ ಈ ಯಂತ್ರಗಳನ್ನು ನಿರ್ಮಿಸಲಾಗಿದ್ದು ಇತರ ರಾಜ್ಯಗಳಿಂದಲೂ ವಾಣಿಜ್ಯಕ ಬಳಕೆಗೆ ಬೇಡಿಕೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಾಕ್‌ಡೌನ್ ಕೊನೆಗೊಂಡ ನಂತರದ ದಿನಗಳಲ್ಲಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ಅತ್ಯಂತ ನಿರ್ಣಾಯಕವಾಗಲಿದೆ. ಈಗ ಆಲ್ಕೋಹಾಲ್ ಮಿಶ್ರಿತ ದ್ರಾವಣವನ್ನು ಸಿಂಪಡಿಸುವ ಮೂಲಕ ನೆಲಗಳ ಸ್ವಚ್ಛತೆ ನಡೆಸಲಾಗುತ್ತಿದೆ. ಈ ಕಾರ್ಯವನ್ನು ಎಲ್‌ಇಡಿ ಆಧಾರಿತ ಯಂತ್ರ ಸರಳ ಮತ್ತು ಕ್ಷಿಪ್ರಗೊಳಿಸಲಿದೆ ಎಂದು ಐಐಟಿಯ ಅಸೋಸಿಯೇಟ್ ಪ್ರೊಫೆಸರ್ ಸೆಂಥಿಲ್‌ಮುರುಗನ್ ಸುಬ್ಬಯ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News