ವುಹಾನ್ ನಗರದ ಬೀಗಮುದ್ರೆ ತೆರವು
Update: 2020-04-08 23:13 IST
ಬೀಜಿಂಗ್, ಎ. 8: ಚೀನಾದಲ್ಲಿ ಕೊರೋನ ವೈರಸ್‌ನ ಆಡುಂಬೊಲವಾಗಿದ್ದ ವುಹಾನ್ ನಗರದ 11 ವಾರಗಳ ಬೀಗಮುದ್ರೆಯನ್ನು ಬುಧವಾರ ತೆರವುಗೊಳಿಸಲಾಗಿದೆ. ಅದೇ ವೇಳೆ, ಚೀನಾಕ್ಕೆ ಬಂದಿರುವ ವಿದೇಶೀಯರಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಶ್ಯದೊಂದಿಗೆ ಗಡಿ ಹೊಂದಿರುವ ಈಶಾನ್ಯ ರಾಜ್ಯ ಹೇಲಾಂಗ್‌ಜಿಯಾಂಗ್‌ನಲ್ಲಿ ಜನರ ಚಲನವಲನಗಳ ಮೇಲೆ ನಿರ್ಬಂಧ ಹೇರಲಾಗಿದೆ.
ಚೀನಾದಲ್ಲಿ ಬುಧವಾರ 62 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಪೈಕಿ 59 ಮಂದಿ ವಿದೇಶೀಯರು.
ಹುಬೈ ಪ್ರಾಂತದ ರಾಜಧಾನಿ ವುಹಾನ್ ನಗರದ ಗಡಿಗಳನ್ನು ಜನವರಿ 23ರ ಬಳಿಕ ಮೊದಲ ಬಾರಿಗೆ ತೆರೆಯಲಾಗಿದೆ. ಅಂದು ವೈರಸ್‌ನ ಹರಡುವಿಕೆಯನ್ನು ತಡೆಯಲು ನಗರಕ್ಕೆ ಬೀಗ ಹಾಕಲಾಗಿತ್ತು.