ಐಸಿಯುನಲ್ಲಿ ಬೊರಿಸ್ ಜಾನ್ಸನ್ ಚೇತರಿಕೆ

Update: 2020-04-09 17:10 GMT

ಲಂಡನ್, ಎ. 9: ಕೋವಿಡ್-19 ಕಾಯಿಲೆಯಿಂದ ಬಳಲುತ್ತಿರುವ ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚೇತರಿಸುತ್ತಿದ್ದಾರೆ ಎಂದು ದೇಶದ ಸಚಿವರೊಬ್ಬರು ಗುರುವಾರ ತಿಳಿಸಿದ್ದಾರೆ.

ಅಧಿಕ ಜ್ವರ ಮತ್ತು ಕೆಮ್ಮುವಿನಿಂದ ಬಳಲುತ್ತಿದ್ದ 55 ವರ್ಷದ ಜಾನ್ಸನ್‌ರನ್ನು ರವಿವಾರ ಸಂಜೆ ಇಲ್ಲಿನ ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹಾಗೂ ಸೋಮವಾರ ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು.

‘‘ಅವರು ಚೇತರಿಸುತ್ತಿದ್ದಾರೆ’’ ಎಂದು ಸಂಸ್ಕೃತಿ ಸಚಿವ ಒಲಿವರ್ ಡೌಡನ್ ಹೇಳಿದರು. ‘‘ಅವರು ಸ್ಥಿರವಾಗಿದ್ದಾರೆ, ಚೇತರಿಸುತ್ತಿದ್ದಾರೆ, ಎದ್ದು ಕುಳಿತುಕೊಂಡಿದ್ದಾರೆ ಹಾಗೂ ವೈದ್ಯಕೀಯ ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News