ಕೊರೋನವೈರಸ್‌ನಿಂದ 50 ಕೋಟಿ ಜನರು ಬಡತನಕ್ಕೆ: ಆಕ್ಸ್‌ಫಾಮ್ ವರದಿ

Update: 2020-04-09 17:13 GMT

ಲಂಡನ್, ಎ. 9: ಕೊರೋನವೈರಸ್ ಸಾಂಕ್ರಾಮಿಕವು ಸುಮಾರು 50 ಕೋಟಿ ಜನರನ್ನು ಬಡತನದ ದವಡೆಗೆ ನೂಕಬಹುದಾಗಿದೆ ಎಂದು ಸಾಮಾಜಿಕ ಸಂಘಟನೆ ‘ಆಕ್ಸ್‌ಫಾಮ್’ ಗುರುವಾರ ಹೇಳಿದೆ.

ನೈರೋಬಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ 19 ಸ್ವತಂತ್ರ ಸಾಮಾಜಿಕ ಸಂಘಟನೆಗಳ ಒಕ್ಕೂಟವಾಗಿರುವ ಆಕ್ಸ್‌ಫಾಮ್ ಈ ಸಂಬಂಧ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಮನೆಗಳ ಆದಾಯ ಖೋತಾ ಅಥವಾ ಬಳಕೆ ಖೋತಾದಿಂದಾಗಿ ಉಂಟಾಗುವ ಜಾಗತಿಕ ಬಡತನವನ್ನು ವಿಶ್ಲೇಷಿಸಿದೆ.

‘‘ವೇಗವಾಗಿ ಅನಾವರಣಗೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟು 2008ರ ಜಾಗತಿಕ ಆರ್ಥಿಕ ಹಿಂಜರಿತಕ್ಕಿಂತಲೂ ಗಂಭೀರವಾಗಿದೆ’’ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News