ನಾಗರಿಕರ ಲಾಕ್‌ಡೌನ್‌ನ ಸಮಸ್ಯೆಗಳಿಗೆ ಕಂಟ್ರೋಲ್ ರೂಂ ಮೂಲಕ ಪರಿಹಾರ: ಕೇಂದ್ರ ಗೃಹ ಸಚಿವಾಲಯ

Update: 2020-04-09 17:38 GMT

ಹೊಸದಿಲ್ಲಿ, ಎ.9: ಲಾಕ್‌ಡೌನ್‌ನಿಂದಾಗಿ ಸಂಷ್ಟಕ್ಕೀಡಾದ ವ್ಯಕ್ತಿಗಳಿಗೆ ನೆರವಾಗಲು ಕೇಂದ್ರ ಗೃಹ ಸಚಿವಾಲಯವು ಸ್ಥಾಪಿಸಿರುವ ನಿಯಂತ್ರಣ ಕೊಠಡಿಯು, ದಿನಕ್ಕೆ 300 ಪ್ರಕರಣಗಳನ್ನು ಬಗೆಹರಿಸಲು ಶಕ್ತವಾಗಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾತ್ಸವ ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ಲಾಕ್‌ಡೌನ್ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡಿರುವ ಜನರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರಕಾರಗಳು ವಿವಿಧ ವಿಧಾನಗಳನ್ನು ಅಳವಡಿಸಿಕೊಂಡಿವೆ ಎಂದು ತಿಳಿಸಿದರು.

ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣ ಕೊಠಡಿಯು ಬುಧವಾರದಂದು 300 ಸಮಸ್ಯೆಗಳನ್ನು ಬಗೆಹರಿಸಿದೆಯೆಂದು ಆಕೆ ಹೇಳಿದ್ದಾರೆ.

ಹೆಲ್ಪ್‌ಲೈನ್‌ಗಳು, ಆ್ಯಪ್‌ಗಳ ಬಳಕೆ, ಪರಿಹಾರ ಶಿಬಿರಳು, ಆಶ್ರಯಕೇಂದ್ರಗಳು ಹಾಗೂ ಆಹಾರ ಶಿಬಿರಗಳನ್ನು ಸ್ಥಾಪಿಸುವ ಮೂಲಕ ವಿವಿಧ ರಾಜ್ಯಗಳು ಲಾಕ್‌ಡೌನ್‌ನಿಂದಾಗಿ ತೊಂದರೆಗೀಡಾದವರಿಗೆ ನೆರವಾಗುತ್ತಿವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News