ಕೊರೋನ ಗೆದ್ದು ಮನೆಗೆ ಮರಳಿದ ಭಾರತ ಮೂಲದ 98 ವರ್ಷದ ಅಜ್ಜಿ
Update: 2020-04-10 23:19 IST
ಲಂಡನ್, ಎ. 10: ಕೋವಿಡ್-19 ಕಾಯಿಲೆಯಿಂದ ಬಳಲುತ್ತಿದ್ದ 98 ವರ್ಷದ ಭಾರತ ಮೂಲದ ಅಜ್ಜಿಯೊಬ್ಬರು ಆಸ್ಪತ್ರೆಯಿಂದ ಯಶಸ್ವಿಯಾಗಿ ಮನೆಗೆ ಮರಳಿದ್ದು ವೈದ್ಯರು ಮತ್ತು ಕುಟುಂಬ ಸದಸ್ಯರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಡಾಫ್ನಿ ಶಾ ಅವರನ್ನು ಅಧಿಕ ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಸ್ಕಾಟ್‌ಲ್ಯಾಂಡ್‌ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಕೊರೋನ ವೈರಸ್ ಸೋಂಕು ಇರುವುದು ಖಚಿತವಾಗಿತ್ತು.
ವೇಗವಾಗಿ ಚೇತರಿಸಿಕೊಂಡ ಅವರು ಸೋಮವಾರ ಗುಣಮುಖರಾಗಿ ಮನೆಗೆ ಮರಳಿದ್ದಾರೆ.