ಕೊರೋನ ವೈರಸ್: ಒಡಿಶಾದ ಬಳಿಕ ಈಗ ಪಂಜಾಬಿನಲ್ಲಿಯೂ ಲಾಕ್‌ಡೌನ್ ವಿಸ್ತರಣೆ

Update: 2020-04-10 18:01 GMT
Punjab Chief Minister Amarinder Singh

ಚಂಡಿಗಡ, ಎ.10: ರಾಜ್ಯದಲ್ಲಿ ಮೇ 1ರವರೆಗೆ ಲಾಕ್‌ಡೌನ್ ಅನ್ನು ವಿಸ್ತರಿಸುವುದಾಗಿ ಪಂಜಾಬ್ ಸರಕಾರವು ಶುಕ್ರವಾರ ಪ್ರಕಟಿಸಿದೆ. ತನ್ಮೂಲಕ ಒಡಿಶಾದ ಬಳಿಕ ಈ ನಿರ್ಧಾರವನ್ನು ಕೈಗೊಂಡ ಎರಡನೇ ರಾಜ್ಯವಾಗಿದೆ.

ಪಂಜಾಬಿನಲ್ಲಿ ಈವರೆಗೆ 132 ಕೊರೋನ ವೈರಸ್ ಪ್ರಕರಣಗಳು ವರದಿಯಾಗಿವೆ.

ರಾಬಿ ಬೆಳೆಯ ಕೊಯ್ಲನ್ನು ನಡೆಸಲು ಅನುಕೂಲವಾಗುವಂತೆ ತಾನು ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಬಹುದು ಎಂದೂ ಪಂಜಾಬ್ ಹೇಳಿದೆ. ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ಕೊರೋನ ವೈರಸ್ ಹರಡುವಿಕೆ ಕುರಿತು ಆರೋಗ್ಯ ತಜ್ಞರು ವ್ಯಕ್ತಪಡಿಸಿರುವ ಮುನ್ನಂದಾಜುಗಳು ಭಯಂಕರವಾಗಿವೆ ಮತ್ತು ಭೀತಿಯನ್ನು ಹುಟ್ಟಿಸುತ್ತಿವೆ. ರಾಜ್ಯದಲ್ಲಿ ಹೊಸದಾಗಿ ವರದಿಯಾಗಿರುವ ಹೆಚ್ಚಿನ ಪ್ರಕರಣಗಳು ಸಮುದಾಯ ಪ್ರಸರಣದ್ದಾಗಿವೆ. ರಾಜ್ಯವು ಸಮುದಾಯ ಪ್ರಸರಣದ ಹಂತವನ್ನು ಪ್ರವೇಶಿಸುತ್ತಿದೆ ಎನ್ನುವ ಸೂಚನೆಗಳು ಲಭಿಸುತ್ತಿವೆ ಎಂದರು.

ಸಮುದಾಯ ಪ್ರಸರಣವು ಕೊರೋನ ವೈರಸ್ ಪಿಡುಗಿನ ಮೂರನೇ ಹಂತವಾಗಿದ್ದು,ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಮತ್ತು ಸೋಂಕಿನ ಮೂಲವನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News