×
Ad

ಯುರೋಪ್: 75,000 ಸಾವು

Update: 2020-04-12 23:01 IST

ಪ್ಯಾರಿಸ್, ಎ. 12: ಯುರೋಪ್‌ನಲ್ಲಿ 75,000ಕ್ಕೂ ಅಧಿಕ ಮಂದಿ ನೂತನ-ಕೊರೋನವೈರಸ್‌ನಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಯ ಅಂಕಿಅಂಶಗಳು ರವಿವಾರ ತಿಳಿಸಿದೆ. ಈ ಪೈಕಿ 80 ಶೇಕಡಕ್ಕೂ ಅಧಿಕ ಸಾವುಗಳು ಇಟಲಿ, ಸ್ಪೇನ್, ಫ್ರಾನ್ಸ್ ಮತ್ತು ಬ್ರಿಟನ್‌ಗಳಲ್ಲಿ ಸಂಭವಿಸಿವೆ.

ಒಟ್ಟು 9,09,673 ಸೋಂಕು ಪ್ರಕರಣಗಳು ವರದಿಯಾಗಿರುವ ಯುರೋಪ್, ಕೋವಿಡ್-19 ಕಾಯಿಲೆಯಿಂದ ಅತಿ ಪೀಡಿತವಾದ ಖಂಡವಾಗಿದೆ.

ಯುರೋಪ್‌ನ ಅತ್ಯಂತ ಹಾನಿಗೊಳಗಾದ ದೇಶ ಇಟಲಿಯಾಗಿದ್ದು, ಅಲ್ಲಿ 19,468 ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ಸ್ಪೇನ್ (16,972 ಸಾವು), ಫ್ರಾನ್ಸ್ (13,832 ಸಾವು) ಮತ್ತು ಬ್ರಿಟನ್ (9,875 ಸಾವು)ಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News