ವಿದೇಶೀಯರ ನಾನ್-ಇಮಿಗ್ರಾಂಟ್ ವೀಸಾ ವಿಸ್ತರಣೆ ಅಮೆರಿಕ ಭರವಸೆ

Update: 2020-04-15 15:59 GMT

ವಾಶಿಂಗ್ಟನ್, ಎ. 15: ನಾನ್-ಇಮಿಗ್ರಾಂಟ್ ವೀಸಾದಲ್ಲಿ ಅಮೆರಿಕಕ್ಕೆ ತೆರಳಿ, ಅಲ್ಲಿ ಸಿಕ್ಕಿಹಾಕಿಕೊಂಡಿರುವವರ ವೀಸಾಗಳನ್ನು ವಿಶೇಷ ನೆಲೆಯಲ್ಲಿ ವಿಸ್ತರಿಸಬಹುದಾಗಿದೆ ಅಥವಾ ಅಗತ್ಯವಿರುವ ಪ್ರಕರಣಗಳಲ್ಲಿ ವಿಸ್ತರಣೆ ಪ್ರಕ್ರಿಯೆಯನ್ನು ತ್ವರಿತೊಳಿಸಬಹುದಾಗಿದೆ ಎಂದು ಅಮೆರಿಕ ಮಂಗಳವಾರ ತಿಳಿಸಿದೆ.

ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕದ ತೀವ್ರ ದಾಳಿಗೆ ತುತ್ತಾಗಿರುವ ಅಮೆರಿಕದಲ್ಲಿ ಈಗ ರಾಷ್ಟ್ರೀಯ ತುರ್ತುಪರಿಸ್ಥಿತಿ ಜಾರಿಯಲ್ಲಿದೆ ಹಾಗೂ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುವನ್ನು ನಿಷೇಧಿಸಲಾಗಿದೆ.

  ಪ್ರವಾಸ, ವ್ಯಾಪಾರ, ವೈದ್ಯಕೀಯ ಚಿಕಿತ್ಸೆ ಹಾಗೂ ಕೆಲವು ನಿರ್ದಿಷ್ಟ ಕೆಲಸಗಳಿಗಾಗಿ ತಾತ್ಕಾಲಿಕವಾಗಿ ಅಮೆರಿಕಕ್ಕೆ ಪ್ರಯಾಣಿಸಲು ಬಯಸುವ ವಿದೇಶೀಯರಿಗೆ ಆ ದೇಶವು ‘ನಾನ್-ಇಮಿಗ್ರಾಂಟ್’ ವೀಸಾಗಳನ್ನು ನೀಡುತ್ತದೆ.

ಭಾರತೀಯರಿಗ ಸಾಮಾನ್ಯವಾಗಿ ನೀಡಲಾಗುತ್ತಿರುವ ನಾನ್-ಇಮಿಗ್ರಾಂಟ್ ವೀಸಾಗಳು ಈ ರೀತಿಯಿವೆ: ಬಿ1 ಮತ್ತು ಬಿ2 ವೀಸಾಗಳನ್ನು ವ್ಯಾಪಾರ ಅಥವಾ ಪ್ರಯಾಣ ಉದ್ದೇಶಗಳಿಗಾಗಿ, ಎಫ್-1 ವೀಸಾಗಳನ್ನು ವಿದ್ಯಾರ್ಥಿಗಳಿಗೆ, ಜೆ-1 ವೀಸಾಗಳನ್ನು ಸಂದರ್ಶಕರ ವಿನಿಮಯಗಳಿಗಾಗಿ, ಅದರಲ್ಲೂ ಮುಖ್ಯವಾಗಿ ಸಂಶೋಧನಾ ವಿದ್ವಾಂಸರು ಮತ್ತು ವೈದ್ಯರ ವಿನಿಮಯಕ್ಕಾಗಿ, ಎಚ್-1ಬಿ ವೀಸಾಗಳನ್ನು ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗಾಗಿ ಹಾಗೂ ಎಲ್-1 ವೀಸಾಗಳನ್ನು ಒಂದೇ ಕಂಪೆನಿಯಲ್ಲಿ ವರ್ಗಾವಣೆಯಾಗುವವರಿಗಾಗಿ ನೀಡಲಾಗುತ್ತದೆ.

ಕೋವಿಡ್-19 ರಾಷ್ಟ್ರೀಯ ತುರ್ತುಪರಿಸ್ಥಿತಿಯ ನೇರ ಪ್ರಭಾವಕ್ಕೆ ಗುರಿಯಾಗಿರುವ ವ್ಯಕ್ತಿಗಳು, ಉದ್ಯೋಗದಾತರು ಮತ್ತು ಇತರರು ಎದುರಿಸುತ್ತಿರುವ ವಲಸೆ ಸಂಬಂಧಿ ಸಮಸ್ಯೆಗಳನ್ನು ಬಗೆಹರಿಸಲು ಅಮೆರಿಕವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವೆುರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಮಂಗಳವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News