ಕೋವಿಡ್-19ಗೆ ಮೇಘಾಲಯದ ವೈದ್ಯ ಬಲಿ

Update: 2020-04-15 16:36 GMT
ಸಾಂದರ್ಭಿಕ ಚಿತ್ರ

ಶಿಲ್ಲಾಂಗ್, ಎ.15 ಈಶಾನ್ಯ ಭಾರತದ ರಾಜ್ಯ ಮೇಘಾಲಯದ ಪ್ರಪ್ರಥಮ ಕೊರೋನ ಪೀಡಿತ ವ್ಯಕ್ತಿ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರಿಗೆ ಕೊರೋನ ತಗಲಿರುವುದು ಸೋಮವಾರ ಸಂಜೇ ದೃಢಪಟ್ಟಿತ್ತು. 69 ವರ್ಷ ವಯಸ್ಸಿನ ಡಾ.ಜಾನ್ ಎಲ್. ಸಿಲೊ ರಿನ್‌ಥಾತಿಯಾಂಗ್, ಇಂದು ಬೆಳಗ್ಗೆ ಶಿಲ್ಲಾಂಗ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಕುಟುಂಬದ ಇತರ ಆರು ಮಂದಿ ಸದಸ್ಯರಿಗೂ ಸೋಂಕು ತಗಲಿರುವುದು ಈಗ ದೃಢಪಟ್ಟಿದೆಯೆಂದು ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ತಿಳಿಸಿದ್ದಾರೆ.

 ಡಾ.ರಿನ್‌ಥಾತಿಯಾಂಗ್‌ ಸಾವಿನ ಬಳಿಕ ಅವರ ಸಂಪರ್ಕಕ್ಕೆ ಬಂದಿದ್ದ 68 ಮಂದಿಯನ್ನು ಪರೀಕ್ಷಿಸಲಾಗಿದ್ದು, ಅವರ ಪೈಕಿ ಮೃತ ವೈದ್ಯರ ಕುಟುಂಬ ಸದಸ್ಯ ಹಾಗೂ ಸಹಾಯಕರಿಗೆ ಪಾಸಿಟಿವ್ ಬಂದಿದೆಯೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

 ಡಾ..ರಿನ್‌ತಾತಿಯಾಂಗ್ ಅವರನ್ನು ದಾಖಲಿಸಲಾಗಿದ್ದ ಬೆಥನಿ ಆಸ್ಪತ್ರೆಗೆ ಸಂಪೂರ್ಣ ಬೀಗ ಜಡಿಯಲಾಗಿದೆ. ರಿ ಬೊಯಿ ಜಿಲ್ಲೆಯಲ್ಲಿರುವ ಇದೇ ಆಸ್ಪತ್ರೆಯ ಇನ್ನೊಂದು ಕ್ಯಾಂಪ ಸ್‌ಗೂ ಬೀಗಮುದ್ರೆ ಜಡಿಯಲಾಗಿದೆ ಹಾಗೂ ಅದನ್ನು ಸೋಂಕುರಹಿತ ಗೊಳಿಸಲಾಗಿದೆಯೆಂದು ಮೂಲಗಳು ತಿಳಿಸಿವೆ. ಮಾರ್ಚ್ 22ರಿಂದ ಶಿಲ್ಲಾಂಗ್‌ನ ಬೆಥನಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸುಮಾರು 2 ಸಾವಿರ ಮಂದಿಯನ್ನು ಕೂಡಾ ಪತ್ತೆಹಚ್ಚಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News