×
Ad

ಪೊಲೀಸ್ ವ್ಯಾನ್‌ನೊಳಗೆ ಗಂಡುಮಗುವಿಗೆ ಜನ್ಮ ನೀಡಿದ ದಿಲ್ಲಿ ಮಹಿಳೆ

Update: 2020-04-17 13:50 IST

ಹೊಸದಿಲ್ಲಿ, ಎ.17: ಮಹಿಳೆಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದ ದಾರಿ ಮಧ್ಯೆಯೇ ಪೊಲೀಸ್ ವ್ಯಾನ್‌ನೊಳಗೆ ಗಂಡುಮಗುವಿಗೆ ಜನ್ಮ ನೀಡಿದ ಘಟನೆ ರಾಷ್ಟ್ರರಾಜಧಾನಿಯಲ್ಲಿ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ದಿಲ್ಲಿಯ ಮಿನಿ ಕುಮಾರಿ ಎಂಬ ಮಹಿಳೆ ತನ್ನ ಕುಟುಂಬ ಸದಸ್ಯರ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಕಾನ್‌ಸ್ಟೇಬಲ್ ಸುಮನ್‌ರನ್ನು ಭೇಟಿಯಾಗಿದ್ದರು.

ತುಂಬು ಗರ್ಭಿಣಿ ಮಹಿಳೆಗೆ ಆ್ಯಂಬುಲೆನ್ಸ್ ಒದಗಿಸುವಂತೆ ಮಹಿಳೆಯ ಗಂಡ ಪೊಲೀಸ್ ಕಾನ್‌ಸ್ಟೇಬಲ್ರನ್ನು ಕೇಳಿಕೊಂಡಿದ್ದರು. ಕಾನ್‌ಸ್ಟೇಬಲ್ ಹಿರಿಯ ಅಧಿಕಾರಿಗೆ ವಿಷಯ ತಿಳಿಸಿದರು. ಅವರು ಪೊಲೀಸ್ ವ್ಯಾನ್‌ನ್ನು ಕಳುಹಿಸಿಕೊಟ್ಟಿದ್ದರು ಎಂದು ಡಿಪಿಸಿ(ಪಶ್ಚಿಮ)ದೀಪಕ್ ಪುರೋಹಿತ್ ಹೇಳಿದ್ದಾರೆ.

 ಪೊಲೀಸ್ ವ್ಯಾನ್ ಆಸ್ಪತ್ರೆಗೆ ತಲುಪಲು 1 ಕಿ.ಮೀ.ದೂರವಿರುವಾಗಲೇ ಮಹಿಳೆ ಮಿನಿ ಅವರು ಗುರುವಾರ ರಾತ್ರಿ 9:30ರ ಸುಮಾರಿಗೆ ವ್ಯಾನ್‌ನೊಳಗೆ ಗಂಡು ಮಗುವಿಗೆ ಜನ್ಮ ನೀಡಿದರು.  ತಕ್ಷಣವೇ ವೈದ್ಯರಿಗೆ ಕರೆ ಮಾಡಲಾಗಿದ್ದು, ಮಗುವನ್ನು ಟವಲ್‌ನಲ್ಲಿ ಸುತ್ತಿಡಲಾಗಿತ್ತು. ವೈದ್ಯರು ಕತ್ತರಿ ಹಾಗೂ ಇತರ ಸಲಕರಣೆಯ ಜೊತೆಗೆ ಸ್ಥಳಕ್ಕೆ ಆಗಮಿಸಿದ್ದರು. ಮಹಿಳೆ ಹಾಗೂ ಮಗುವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪುರೋಹಿತ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News