ಕೊರೋನ ವೈರಸ್ ವಿರುದ್ಧ ಹೋರಾಡಲು ಸರಕಾರ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ: ಅಮಿತ್ ಶಾ

Update: 2020-04-17 14:03 GMT

ಹೊಸದಿಲ್ಲಿ.ಎ.17: ದೇಶದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗು ಸೃಷ್ಟಿಸಿರುವ ಬಿಕ್ಕಟ್ಟನ್ನು ಎದುರಿಸಲು ನರೇಂದ್ರ ಮೋದಿ ಸರಕಾರವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶುಕ್ರವಾರ ತಿಳಿಸಿದ್ದಾರೆ.

ಆರ್ಥಿಕತೆಯನ್ನು ಉತ್ತೇಜಿಸಲು ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಆರ್‌ಬಿಐ ಅನ್ನು ಅಭಿನಂದಿಸಿರುವ ಅವರು,ಇಂತಹ ಕ್ರಮಗಳು ಮೋದಿಯವರ ಮುನ್ನೋಟವನ್ನು ಇನ್ನಷ್ಟು ಬಲಗೊಳಿಸುತ್ತವೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಸದೃಢ ಮತ್ತು ಸ್ಥಿರ ಭಾರತಕ್ಕಾಗಿ ಯೋಜಿಸುವಾಗ ಜನರ ಬದುಕುಗಳಲ್ಲಿ ವ್ಯತ್ಯಯಗಳು ಕನಿಷ್ಠವಾಗಿರುವಂತೆ ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಸರಕಾರವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಅವರು ಟ್ವೀಟಿಸಿದ್ದಾರೆ.

 ನಬಾರ್ಡ್‌ಗೆ 20,000 ಕೋ.ರೂ. ಮತ್ತು ಸಿಡ್ಬಿಗೆ 15,000 ಕೋ.ರೂ.ಗಳ ಸಾಲ ಸೌಲಭ್ಯ ಒದಗಿಸುವ ಆರ್‌ಬಿಐ ನಿರ್ಧಾರದಿಂದ ಕೃಷಿಕರಿಗೆ ಹೆಚ್ಚಿನ ನೆರವು ದೊರೆಯಲಿದೆ,ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಹೆಚ್ಚು ಅಗತ್ಯವಾಗಿರುವ ಹಣಕಾಸು ಸ್ಥಿರತೆಯು ಲಭಿಸಲಿದೆ ಮತ್ತು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಉತ್ತೇಜಿಸಲಿದೆ ಎಂದು ಶಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News