×
Ad

20,000ದ ಗಡಿ ದಾಟಿದ ಫ್ರಾನ್ಸ್

Update: 2020-04-21 22:31 IST
ಸಾಂದರ್ಭಿಕ ಚಿತ್ರ

ಪ್ಯಾರಿಸ್, ಎ. 21: ಫ್ರಾನ್ಸ್‌ನಲ್ಲಿ ನೋವೆಲ್-ಕೊರೋನವೈರಸ್‌ನಿಂದಾಗಿ ಸಂಭವಿಸಿದ ಸಾವುಗಳ ಸಂಖ್ಯೆ ಸೋಮವಾರ 20,000ವನ್ನು ಮೀರಿದೆ. ಅಲ್ಲಿ 24 ಗಂಟೆಗಳ ಅವಧಿಯಲ್ಲಿ 547 ಸಾವುಗಳು ಸಂಭವಿಸಿವೆ.

‘‘ಇಂದು ರಾತ್ರಿ ನಮ್ಮ ದೇಶವು ಅನಪೇಕ್ಷಿತ ಗಡಿಯೊಂದನ್ನು ದಾಟಿದೆ’’ ಎಂದು ದೇಶದ ಉನ್ನತ ಆರೋಗ್ಯ ಅಧಿಕಾರಿ ಜೆರೋಮ್ ಸ್ಯಾಲಮಾನ್ ಸುದ್ದಿಗಾರರಿಗೆ ತಿಳಿಸಿದರು.

ದೇಶದಲ್ಲಿ ಕೊರೋನವೈರಸ್‌ನಿಂದಾಗಿ ಸಾವಿಗೀಡಾದವರ ಸಂಖ್ಯೆ ಈಗ 20,265ನ್ನು ತಲುಪಿದೆ ಎಂದು ಅವರು ಹೇಳಿದರು. ಅದೇ ವೇಳೆ, ಆಸ್ಪತ್ರೆಗಳು ಮತ್ತು ಆರೈಕೆ ಮನೆಗಳಲ್ಲಿ ಸಂಭವಿಸುತ್ತಿರುವ ಸಾವುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಘೋಷಿಸಿದರು.

ಫ್ರಾನ್ಸ್, 20,000ಕ್ಕಿಂತ ಹೆಚ್ಚಿನ ಸಾವುಗಳನ್ನು ದಾಖಲಿಸಿದ ನಾಲ್ಕನೇ ದೇಶವಾಗಿದೆ. 2003ರಲ್ಲಿ ದೇಶದಲ್ಲಿ ಬೀಸಿದ ಬಿಸಿ ಗಾಳಿಯಲ್ಲಿ ಸುಮಾರು 19,000 ಮಂದಿ ಬೆಂದು ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News