×
Ad

ಬ್ರಿಟನ್: ಭಾರತೀಯರು ಕೊರೋನದಿಂದ ಅತಿ ಭಾಧಿತರು

Update: 2020-04-23 22:26 IST

ಲಂಡನ್, ಎ. 23: ಬ್ರಿಟನ್‌ನಲ್ಲಿರುವ ಭಾರತ ಮೂಲದ ಜನರು ಕೊರೋನ ವೈರಸ್‌ನಿಂದ ಅತಿ ಹೆಚ್ಚು ಬಾಧೆಗೊಳಗಾದ ಜನ ಸಮುದಾಯವಾಗಿದೆ ಎಂದು ಅಲ್ಲಿನ ಕೋವಿಡ್-19 ಸಾವುಗಳು ಅಧಿಕೃತ ಅಂಕಿಅಂಶಗಳು ತಿಳಿಸಿವೆ.

ಎಪ್ರಿಲ್ 17ರವರೆಗೆ ಕೊರೋನ ವೈರಸ್‌ನಿಂದಾಗಿ ಬ್ರಿಟನ್‌ನ ಆಸ್ಪತ್ರೆಗಳಲ್ಲಿ ಮೃತಪಟ್ಟಿರುವ 13,918 ಮಂದಿಯ ಪೈಕಿ 16.2 ಶೇಕಡದಷ್ಟು ಕರಿಯರು, ಏಶ್ಯನ್ನರು ಮತ್ತು ಜನಾಂಗೀಯ ಅಲ್ಪಸಂಖ್ಯಾತ ಹಿನ್ನೆಲೆಯವರಾಗಿದ್ದಾರೆ. ಇದರಲ್ಲಿ ಭಾರತೀಯ ಜನಾಂಗೀಯರ ಪ್ರಮಾಣ 3 ಶೇಕಡ ಎಂದು ನ್ಯಾಶನಲ್ ಹೆಲ್ತ್ ಸರ್ವಿಸ್ (ಎನ್‌ಎಚ್‌ಎಸ್) ಇಂಗ್ಲೆಂಡ್ ಬಿಡುಗಡೆ ಮಾಡಿರುವ ಅಂಕಿಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News