ವಲಸಿಗರನ್ನು ನಿಷೇಧಿಸುವ ಆದೇಶಕ್ಕೆ ಟ್ರಂಪ್ ಸಹಿ

Update: 2020-04-23 17:05 GMT

ವಾಶಿಂಗ್ಟನ್, ಎ. 23: ಅಮೆರಿಕದ ಖಾಯಂ ವಾಸ್ತವ್ಯವನ್ನು ಬಯಸುವವರಿಗೆ ಹೊಸದಾಗಿ ಹಸಿರು ಕಾರ್ಡ್‌ಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದಕ್ಕೆ ಸಂಬಂಧಿಸಿದ ಆದೇಶವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸಹಿ ಹಾಕಿದ್ದಾರೆ.

ನೋವೆಲ್-ಕೊರೋನ ವೈರಸ್ ನೀಡಿರುವ ಆರ್ಥಿಕ ಹೊಡೆತದಿಂದ ಅಮೆರಿಕ ಚೇತರಿಸುತ್ತಿರುವಾಗ, ಉದ್ಯೋಗ ಗಿಟ್ಟಿಸುವಲ್ಲಿ ಅಮೆರಿಕನ್ನರು ವಿದೇಶೀಯರಿಂದ ಎದುರಿಸುತ್ತಿರುವ ಸ್ಪರ್ಧೆಯನ್ನು ಕಡಿಮೆ ಮಾಡುವುದಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

‘‘ನಮ್ಮ ಶ್ರೇಷ್ಠ ಅಮೆರಿಕನ್ ಉದ್ಯೋಗಿಗಳನ್ನು ರಕ್ಷಿಸುವುದಕ್ಕಾಗಿ, ವಿದೇಶೀಯರು ಅವೆುರಿಕಕ್ಕೆ ವಲಸೆ ಬರುವುದನ್ನು ತಾತ್ಕಾಲಿಕವಾಗಿ ತಡೆಯುವ ಆದೇಶವೊಂದಕ್ಕೆ ನಾನು ಈಗಷ್ಟೇ ಸಹಿ ಹಾಕಿದ್ದೇನೆ’’ ಎಂದು ಬುಧವಾರ ಸಂಜೆ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಹೇಳಿದರು.

‘‘ಇದರಿಂದಾಗಿ, ಎಲ್ಲ ಹಿನ್ನೆಲೆಯ ನಿರುದ್ಯೋಗಿ ಅಮೆರಿಕನ್ನರು ಆದ್ಯತೆಯ ಮೇಲೆ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುತ್ತದೆ’’ ಎಂದರು.

ಯಾರಿಗೆ ಅನ್ವಯವಾಗುವುದಿಲ್ಲ?

ಅಮೆರಿಕದಲ್ಲಿ ವಾಸ್ತವ್ಯ ಬಯಸುವ ಸ್ವದೇಶದಲ್ಲಿರುವ ವಿದೇಶೀಯರಿಗೆ ಮಾತ್ರ ಈ ಆದೇಶ ಅನ್ವಯವಾಗುತ್ತದೆ. ಈಗಾಗಲೇ ಸೂಕ್ತ ವೀಸಾಗಳು ಅಥವಾ ಪ್ರಯಾಣ ದಾಖಲೆಗಳನ್ನು ಹೊಂದಿರುವವರ ಮೇಲೆ ಇದು ಪರಿಣಾಮ ಬೀರುವುದಿಲ್ಲ.

ವೈದ್ಯಕೀಯ ಸಿಬ್ಬಂದಿಯಾಗಿ ಅಥವಾ ಸಂಶೋಧಕರಾಗಿ ಅಥವಾ ಸಶಸ್ತ್ರ ಪಡೆಗಳ ಸದಸ್ಯರಾಗಿ ಖಾಯಂ ಆಗಿ ಅಮೆರಿಕದಲ್ಲಿ ನೆಲೆಸಲು ದೇಶವನ್ನು ಪ್ರವೇಶಿಸಲು ಬಯಸುವ ಹಾಗೂ ಆಶ್ರಯ ಅಥವಾ ನಿರಾಶ್ರಿತ ಸ್ಥಾನಮಾನ ಕೋರಿ ಅಮೆರಿಕ ಪ್ರವೇಶಿಸಲು ಬಯಸುವವರು ಹಾಗೂ ಅಮೆರಿಕದ ಪೋಷಕರು ದತ್ತು ಪಡೆದ ಮಕ್ಕಳು ಅಮೆರಿಕ ಪ್ರವೇಶಿಸುವುದನ್ನು ಆದೇಶವು ತಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News