ಇಟಲಿ: 25,000 ದಾಟಿದ ಕೊರೋನವೈರಸ್ ಸಾವಿನ ಸಂಖ್ಯೆ

Update: 2020-04-23 17:10 GMT

ರೋಮ್ (ಇಟಲಿ), ಎ. 23: ಇಟಲಿಯಲ್ಲಿ ನೂತನ-ಕೊರೋನ ವೈರಸ್‌ನಿಂದಾಗಿ ಮೃತಪಟ್ಟವರ ಅಧಿಕೃತ ಸಂಖ್ಯೆ ಬುಧವಾರ 25,000ವನ್ನು ಮೀರಿದೆ. ಆದರೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಸತತ ಮೂರನೇ ದಿನವೂ ಇಳಿಮುಖವಾಗಿದೆ.

ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 437 ಸಾವುಗಳು ದಾಖಲಾಗಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ 25,085ಕ್ಕೆ ಏರಿದೆ. ಸಾವಿನ ಸಂಖ್ಯೆಯಲ್ಲಿ ಅಮೆರಿಕದ ಬಳಿಕ ಇಟಲಿ ಎರಡನೇ ಸ್ಥಾನದಲ್ಲಿದೆ.

ಆದರೆ, ಇಟಲಿಯ ವಾಸ್ತವಿಕ ಸಾವಿನ ಸಂಖ್ಯೆ ತುಂಬಾ ಹೆಚ್ಚಾಗಿದೆ ಎಂದು ಹೆಚ್ಚಿನ ವೈದ್ಯರು ಭಾವಿಸುತ್ತಾರೆ. ಯಾಕೆಂದರೆ, ಆರೈಕೆ ಮನೆಗಳಲ್ಲಿ ಕೊರೋನವೈರಸ್‌ನಿಂದಾಗಿ ಮೃತಪಟ್ಟವರ ಪೈಕಿ ಹೆಚ್ಚಿನವರ ಸಾವು ದಾಖಲಾಗಿಲ್ಲ ಹಾಗೂ ಆಸ್ಪತ್ರೆಗಳ ಹೊರಗೆ ಮೃತಪಟ್ಟವರ ಸಂಖ್ಯೆ ಗೊತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News