ಅಮೆರಿಕ: 2 ಬೆಕ್ಕುಗಳಲ್ಲಿ ಕೊರೋನ ಸೋಂಕು ಪತ್ತೆ

Update: 2020-04-23 17:14 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಎ. 23: ನ್ಯೂಯಾರ್ಕ್‌ನ ಎರಡು ಬೆಕ್ಕುಗಳಲ್ಲಿ ನೋವೆಲ್-ಕೊರೋನವೈರಸ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ. ಈ ಬೆಕ್ಕುಗಳು ಅಮೆರಿಕದಲ್ಲಿ ಕೋವಿಡ್-19 ಸೋಂಕಿಗೆ ಒಳಗಾದ ಮೊದಲ ಸಾಕುಪ್ರಾಣಿಗಳಾಗಿವೆ.

ಅಮೆರಿಕದ ಕೋವಿಡ್-19 ಕೇಂದ್ರಬಿಂದುವಾಗಿರುವ ನ್ಯೂಯಾರ್ಕ್ ರಾಜ್ಯದ ಪ್ರತ್ಯೇಕಿತ ಸ್ಥಳವೊಂದರಲ್ಲಿ ಈ ಬೆಕ್ಕುಗಳು ವಾಸಿಸುತ್ತಿವೆ ಎಂದು ಕೃಷಿ ಇಲಾಖೆ ಮತ್ತು ರೋಗ ನಿಯಂತ್ರಣ ಕೇಂದ್ರ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆ ತಿಳಿಸಿದೆ.

ಒಂದು ಬೆಕ್ಕಿನ ಒಡೆಯ ಈ ಮೊದಲು ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದರು. ಇನ್ನೊಂದು ಬೆಕ್ಕು ಇದ್ದ ಮನೆಯಲ್ಲಿ ಯಾರೂ ಈ ಸೋಂಕಿಗೆ ಒಳಗಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News