ಬುಲೆಟ್‌ ಟ್ರೈನ್‌ನಂತಹ ದುಂದುವೆಚ್ಚಗಳನ್ನು ನಿಲ್ಲಿಸಿ, ಕೊರೋನ ಬಗ್ಗೆ ಗಮನ ಹರಿಸಿ: ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

Update: 2020-04-24 16:49 GMT

ಹೊಸದಿಲ್ಲಿ,ಎ.24: ಕೊರೋನ ಸೋಂಕಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರಕಾರವು ಬುಲೆಟ್ ಟ್ರೈನ್‌ನಂತಹ ದುಂದುವೆಚ್ಚದ ಯೋಜನೆಗಳನ್ನು ಮುಂದುವರಿಸಿದೆ ಎಂದು ಕಾಂಗ್ರೆಸ್ ಪಕ್ಷವು ಗುರುವಾರ ಟೀಕಿಸಿದೆ.

 ಕಾಂಗ್ರೆಸ್ ನಾಯಕ ರಣದೀಪ್‌ಸಿಂಗ್ ಸುರ್ಜೆವಾಲಾ ಹೊಸದಿಲ್ಲಿಯಲ್ಲಿ ಡಿಜಿಟಲ್ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿ, ‘‘ಸರಕಾರಿ ಉದ್ಯೋಗಿಗಳ ವೇತನ ಹಾಗೂ ಭತ್ತೆಗಳನ್ನು ಕಡಿತಗೊಳಿಸುವ ಬದಲು ಸರಕಾರವು 1.10 ಲಕ್ಷ ಕೋಟಿ ರೂ. ವೆಚ್ಚದ ಬುಲೆಟ್ ಟ್ರೈನ್ ಹಾಗೂ 20 ಸಾವಿರ ಕೋಟಿರೂ. ಮೊತ್ತದ ವಿಸ್ಟಾ ಪ್ರಾಜೆಕ್ಟ್‌ನಂತಹ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕಾಗಿದೆ’’ ಎಂದರು.

ಸರಕಾರಿ ವೆಚ್ಚದಲ್ಲಿ ಶೇ.30ರಷ್ಟು ಕಡಿತ ಮಾಡಲಾಗುವುದೆಂಬ ಸರಕಾರದ ಘೋಷಣೆಯೂ ಕಾರ್ಯಗತವಾಗಿಲ್ಲ ಎಂದುವರು ಹೇಳಿದರು.

    “ಸರಕಾರವು ತಕ್ಷಣವೇ ತಪ್ಪು ದಾರಿಗೆಳೆಯಲ್ಪಟ್ಟ ನೀತಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಕೊರೋನ ವೈರಸ್ ಹಾವಳಿಯ ಸಮಯದಲ್ಲಿ ಉಂಟಾಗಿರುವ ಹಣಕಾಸು ಬಿಕ್ಕಟ್ಟನ್ನು ನಿಭಾಯಿಸುತ್ತಿರುವವರಿಗೆ ಈ ಹಣವನ್ನು ಮೋದಿ ಸರಕಾರ ನೀಡಬೇಕಾಗಿದೆ’’ ಎಂದು ಸುರ್ಜೆವಾಲಾ ತಿಳಿಸಿದ್ದಾರೆ.

 ಇಡೀ ದೇಶವು ಕೋವಿಡ್-19 ಸಾಂಕ್ರಾಮಿಕವನ್ನು ಒಗ್ಗಟ್ಟಿನಿಂದ ಎದುರಿಸುತ್ತಿರುವಾಗ ಬಿಜೆಪಿಯು ಕೋಮುಭೇದ ಹಾಗೂ ದ್ವೇಷದ ವೈರಸ್ ಹರಡುತ್ತಿದೆ ಎಂದು ಸುರ್ಜೆವಾಲಾ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News