×
Ad

ಅಮೆರಿಕ: ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಸಡಿಲಿಕೆ

Update: 2020-04-27 00:05 IST

ವಾಶಿಂಗ್ಟನ್,ಎ.26: ಅಮೆರಿಕದಲ್ಲಿ ಕೊರೋನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹೊರತಾಗಿಯೂ, ಆ ಜೇಷಜ ಅನೇಕ ಸಂಸ್ಥಾನಗಳಲ್ಲಿ ಲಾಕ್‌ಡೌನ್‌ನಲ್ಲಿ ಸಡಿಲಿಕೆಯನ್ನು ಮಾಡಲಾಗಿದೆ.

 ಡಾರ್ಜಿಯಾ, ಒಕ್ಲೊಹಾಮಾ ರಾಜ್ಯಗಳಲ್ಲಿ ಕ್ಷೌರದಂಗಡಿಗಳು, ಬ್ಯೂಟಿ ಪಾರ್ಲರ್‌ಗಳನ್ನ ತೆರೆಯಲುಅನುಮತಿ ನೀಡಲಾಗಿದೆ. ಅಲಾಸ್ಕಾದಲ್ಲಿ ಹೊಟೇಲ್‌ಗಳು, ಅಂಗಡಿಗಳು ಕಾರ್ಯಾಚರಿಸಲು ಅಲ್ಲಿನ ಆಡಳಿತ ಹಸಿರು ನಿಶಾನೆ ತೋರಿಇದೆ. ಅಮೆರಿಕ ನೌಕಾಪಡೆ ವಿಮಾನವಾಹ ಕ ಹಡಗು ಥಿಯೋಡರ್ ರೂಸ್‌ವೆಲ್ಟ್ ಹಡಗಿನಲ್ಲಿ ಕೊರೋನಾ ಸೋಂಕು ಹರಡುವಿಕೆಗೆ ಸಂಬಂಧಿಸಿ ವಜಾಗೊಳಿಸಲ್ಪಟ್ಟಿದ್ದ ಹಡಗಿನ ಕ್ಯಾಪ್ನನ್‌ನ ಮರುನೇಮಕಕ್ಕೆ ನೌಕಾಪಡೆ ಶಿಫಾರಸು ಮಾಡಿದೆ.

 ಅಮೆರಿಕದಲ್ಲಿ ಕಳೆದ 24 ತಾಸುಗಳಲ್ಲಿ 2494 ಮಂದಿ ಕೊರೋನದಿಂದ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 9.36 ಲಕ್ಷವನ್ನು ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News