ಮುಂಬೈ: 25% ನರ್ಸಿಂಗ್ ಹೋಂಗಳ ನೋಂದಣಿ ರದ್ದುಗೊಳಿಸಲು ನಿರ್ಧಾರ

Update: 2020-04-27 17:59 GMT

ಮುಂಬೈ, ಎ. 27: ಚಿಕಿತ್ಸಾಲಯಗಳ ಸೇವೆಯನ್ನು ಮತ್ತೆ ಆರಂಭಿಸುವಂತೆ ಹಲವು ಬಾರಿ ಸೂಚಿಸಿದ್ದರೂ ಇದಕ್ಕೆ ಕಿವಿಗೊಡದ 348 ಖಾಸಗಿ ನರ್ಸಿಂಗ್ ಹೋಂಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಬೃಹನ್ಮುಂಬಯಿ ನಗರಪಾಲಿಕೆ (ಬಿಎಂಸಿ)ಯ ಅಧಿಕಾರಿಗಳು ಹೇಳಿದ್ದಾರೆ.

ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮತ್ತು ಕೊರೋನ ಸೋಂಕು ಇಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ, ಸುರಕ್ಷಿತ ಅಂತರ, ಮಾಸ್ಕ್ ಧಾರಣೆ ಮತ್ತಿತರ ನಿಯಮ ಪಾಲಿಸಿ ಕ್ಲಿನಿಕ್‌ಗಳನ್ನು ಮತ್ತೆ ಆರಂಭಿಸುವಂತೆ ಬಿಎಂಸಿ ಸುತ್ತೋಲೆ ರವಾನಿಸಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಕ್ಲಿನಿಕ್‌ಗಳನ್ನು ಮರು ಆರಂಭಿಸುವ ಸೂಚನೆಯನ್ನು ನಿರ್ಲಕ್ಷಿಸಿದ 348 ಖಾಸಗಿ ನರ್ಸಿಂಗ್ ಹೋಂಗಳ (ನಗರದಲ್ಲಿ ಇರುವ ಒಟ್ಟು ಚಿಕಿತ್ಸಾಲಯಗಳ 25%ದಷ್ಟು ಪ್ರಮಾಣ)ನೋಂದಣಿಯನ್ನು ರದ್ದುಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

 ಸುತ್ತೋಲೆ ರವಾನಿಸಿದ ಬಳಿಕ ಮುಂಬೈಯಲ್ಲಿ 1,068 ಖಾಸಗಿ ಚಿಕಿತ್ಸಾಲಯಗಳು ಬಾಗಿಲು ತೆರೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News