ಕೇರಳ: ಮಾವೋವಾದಿ ಪ್ರಕರಣದಲ್ಲಿ ಮೂವರ ವಿರುದ್ಧ ಚಾರ್ಜ್‌ಶೀಟ್
Update: 2020-04-27 23:31 IST
ಕೊಚ್ಚಿ, ಎ.27: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಕೋಝಿಕೋಡ್ ಮಾವೋವಾದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮೂವರು ಆರೋಪಿಗಳ ವಿರುದ್ಧ ಎರ್ನಾಕುಳಂ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿಯನ್ನು ದಾಖಲಿಸಿದೆ.
ಆರೋಪಿಗಳ ಪೈಕಿ ಅಲ್ಲಾನ್ ಶುಐಬ್(20) ಮತ್ತು ತ್ವಹಾ ಫಸಲ್(24) ಎನ್ನುವವರನ್ನು ಪೊಲೀಸರು ಬಂಧಿಸಿದ್ದು, ಸಿ.ಪಿ.ಉಸ್ಮಾನ್(40) ಎಂಬಾತ ತಲೆಮರೆಸಿಕೊಂಡಿದ್ದಾನೆ.
ಕೋಝಿಕೋಡ್ ನಗರದ ಪಂದೀರನಕಾವು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬಳಿಕ ಎನ್‌ಐಎ ಕೊಚ್ಚಿ ಘಟಕವು ವಹಿಸಿಕೊಂಡಿತ್ತು.