ಕೋವಿಡ್-10: ಮುಂಬೈ, ದಿಲ್ಲಿಗಳನ್ನೂ ಮೀರಿಸಿದ ಅಹ್ಮದಾಬಾದ್ ಸಾವಿನ ದರ

Update: 2020-04-28 17:49 GMT

ಅಹ್ಮದಾಬಾದ್, ಎ.28: ಭಾರತದಲ್ಲಿ ಕೋವಿಡ್-19 ರೋಗಿಗಳ ಸಾವಿನ ದರ ಶೇ.3.1ಆಗಿದ್ದರೆ ಅಹ್ಮದಾಬಾದ್ ಈ ವಿಷಯದಲ್ಲಿ ಬಹು ಮುಂದಕ್ಕೆ ಸಾಗಿದ್ದು,ಅಲ್ಲಿ ಸಾವಿನ ದರ ಶೇ.4.71 ಆಗಿದೆ. ಸೋಮವಾರದವರೆಗೆ ದೇಶದಲ್ಲಿ ಒಟ್ಟು 28,622 ಪ್ರಕರಣಗಳಲ್ಲಿ 899 ಸಾವುಗಳು ಸಂಭವಿಸಿದ್ದರೆ ಅಹ್ಮದಾಬಾದ್‌ನಲ್ಲಿ 2,167 ಪ್ರಕರಣಗಳಲ್ಲಿ 102 ಜನರು ಮೃತರಾಗಿದ್ದಾರೆ.

ಮುಂಬೈ ಮಹಾನಗರದಲ್ಲಿ 5,407 ಪ್ರಕರಣಗಳಲ್ಲಿ 204 (ಶೇ.3.77) ಮತ್ತು ದಿಲ್ಲಿಯಲ್ಲಿ 2,919 ಪ್ರಕರಣಗಳಲ್ಲಿ 54 (ಶೇ.1.85) ಸಾವುಗಳು ಸಂಭವಿಸಿವೆ. ಅಹ್ಮದಾಬಾದ್ ಇವೆರಡೂ ನಗರಗಳನ್ನು ಮೀರಿಸಿದೆ.

 ಗುಜರಾತಿನಲ್ಲಿಯ ಕೊರೋನ ವೈರಸ್ ಸಾವುಗಳಲ್ಲಿ ಶೇ.67.5ರಷ್ಟು ಅಹ್ಮದಾಬಾದ್‌ನಲ್ಲಿಯೇ ಸಂಭವಿಸಿದ್ದು ರಾಜ್ಯಕ್ಕಿಂತ ಹೆಚ್ಚಿನ ಸಾವಿನ ದರವನ್ನು ಹೊಂದಿದೆ. ಗುಜರಾತಿನಲ್ಲಿ ಸೋಮವಾರಕ್ಕೆ ಇದ್ದಂತೆ 3,301 ಕೊರೋನ ವೈರಸ್ ಪ್ರಕರಣಗಳಲ್ಲಿ 151(ಶೇ.4.57) ಜನರು ಸಾವನ್ನಪ್ಪಿದ್ದು,ಮಹಾರಾಷ್ಟ್ರ(ಶೇ.4.24),ರಾಜಸ್ಥಾನ(ಶೇ.2.05),ಉತ್ತರ ಪ್ರದೇಶ (ಶೇ.1.51) ಮತ್ತು ತಮಿಳುನಾಡು(ಶೇ.1.24) ರಾಜ್ಯಗಳನ್ನು ಮೀರಿಸಿದೆ. ಈ ಎಲ್ಲ ರಾಜ್ಯಗಳಲ್ಲಿ ಈವರೆಗೆ 1,500ಕ್ಕಿಂತ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಮಧ್ಯಪ್ರದೇಶ ಮಾತ್ರ ಸಾವಿನ ದರದಲ್ಲಿ (ಶೇ.4.93)ಮುಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News