×
Ad

4 ಸಿಬ್ಬಂದಿಗೆ ಕೊರೋನ ಸೋಂಕು: ಮಹಾರಾಷ್ಟ್ರ ಸಚಿವಾಲಯಕ್ಕೆ 2 ದಿನ ಬೀಗ

Update: 2020-04-28 23:32 IST

ಮುಂಬೈ, ಎ.28: ಮಹಾರಾಷ್ಟ್ರ ಸಚಿವಾಲಯದ 4 ಸಿಬಂದಿಗಳಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಂದಿನ 2 ದಿನ ಸಚಿವಾಲಯವನ್ನು ಮುಚ್ಚಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯ ಸರಕಾರಿ ಇಲಾಖೆಯ 4 ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು ಇವರನ್ನು ಮುಂದಿನ ಚಿಕಿತ್ಸೆಗೆ ಸರಕಾರದ ಅಧೀನದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಪ್ರಿಲ್ 29 ಮತ್ತು 30ರಂದು ಸ್ಯಾನಿಟೈಸೇಷನ್(ಸ್ವಚ್ಛತೆ)ಗಾಗಿ ಸಚಿವಾಲಯವನ್ನು ಮುಚ್ಚಲಾಗುತ್ತದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಸೇವಾ ವಿಭಾಗ) ಸೀತಾರಾಮ್ ಕುಂಟೆ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

 ಸಾಮಾನ್ಯ ಆಡಳಿತ ವಿಭಾಗದವರು ಸ್ವಚ್ಛತಾ ಕಾರ್ಯ ನಿರ್ವಹಿಸಲಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಈಗ ಸಚಿವಾಲಯದಲ್ಲಿ ಕಡಿಮೆ ಸಿಬಂದಿಗಳೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News