ದಿಲ್ಲಿ ಗಡಿಯನ್ನು ಮುಚ್ಚಿದ ಹರ್ಯಾಣ ಸರಕಾರ

Update: 2020-04-28 18:05 GMT

ಗುರುಗ್ರಾಮ, ಎ. 28: ಹರ್ಯಾಣದ ಎಲ್ಲಾ ಗಡಿಗಳನ್ನೂ 15ರಿಂದ 20 ದಿನ ಮುಚ್ಚಿದರೆ ರಾಜ್ಯದಲ್ಲಿ ಕೊರೋನ ವೈರಸ್ ನಿಯಂತ್ರಣಕ್ಕೆ ಬಂದು ರಾಜ್ಯ ಸುರಕ್ಷಿತ ವಲಯಕ್ಕೆ ಬರಬಹುದು. ಆದ್ದರಿಂದ ದಿಲ್ಲಿಯೊಂದಿಗೆ ಇರುವ ಗಡಿಯನ್ನು ಮುಚ್ಚಲಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಹರ್ಯಾಣದ ಗುರುಗ್ರಾಮ ಮತ್ತು ಫರೀದಾಬಾದ್ ನಗರಗಳು ದಿಲ್ಲಿ ಮತ್ತು ನೋಯ್ಡಾಗೆ ಸಮೀಪದಲ್ಲಿವೆ. ಹರ್ಯಾನದಲ್ಲಿ ಉಳಿದುಕೊಂಡು ದಿಲ್ಲಿಯಲ್ಲಿ ಕೆಲಸ ಮಾಡುತ್ತಿರುವ ಜನರಿಂದ ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಕರಣ ಹೆಚ್ಚುತ್ತಿದೆ. ಆದ್ದರಿಂದ ಅಗತ್ಯದ ವಸ್ತುಗಳ ಪೂರೈಕೆಗೆ ಆಸ್ಪದ ನೀಡಿ , ದಿಲ್ಲಿ ಗಡಿಯನ್ನು ಮುಚ್ಚಲಾಗಿದೆ ಎಂದವರು ಹೇಳಿದ್ದಾರೆ.

  ಕೇಂದ್ರದ ಗೃಹ ಸಚಿವಾಲಯದ ಮಾರ್ಗಸೂಚಿಯಂತೆ , ಅವಶ್ಯಕ ವಸ್ತುಗಳ ಪೂರೈಕೆಗೆ ಹಾಗೂ ಇದಕ್ಕೆ ಸಂಬಂಧಿಸಿದ ಜನರಿಗೆ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದವರು ಹೇಳಿದ್ದಾರೆ. ಹರ್ಯಾನದಲ್ಲಿ ವಾಸ್ತವ್ಯವಿರುವ ದಿಲ್ಲಿಯ ಸರಕಾರಿ ಉದ್ಯೋಗಿಗಳಿಗೆ ದಿಲ್ಲಿ ಸರಕಾರ ಅಲ್ಲಿಯೇ ವಾಸ್ತವ್ಯದ ವ್ಯವಸ್ಥೆ ಮಾಡಿಕೊಡಬೇಕು ಎಂದವರು. ಲಾಕ್‌ಡೌನ್ ಮೇ 3ರ ಬಳಿಕವೂ ಮುಂದುವರಿಯಬೇಕು ಎಂಬುದು ತನ್ನ ಅಭಿಪ್ರಾಯವಾಗಿದೆ. ರಾಜ್ಯದಲ್ಲಿ ಈಗ ಕೊರೋನ ವೈರಸ್ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News