ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆ ಆತ್ಮಹತ್ಯೆ

Update: 2020-04-29 17:30 GMT

ನ್ಯೂಯಾರ್ಕ್, ಎ. 29: ಕೊರೋನವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಿರುವ ನ್ಯೂಯಾರ್ಕ್‌ನ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 49 ವರ್ಷದ ಲೊರ್ನಾ ಬ್ರೀನ್ ವರ್ಜೀನಿಯದ ಶಾರ್ಲೋಟ್ಸ್‌ವಿಲ್‌ನಲ್ಲಿ ತನ್ನ ಬದುಕನ್ನು ಕೊನೆಗೊಳಿಸಿದರು ಎಂದು ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಶಾರ್ಲೋಟ್ಸ್‌ವಿಲ್‌ನಲ್ಲಿ ಅವರು ತನ್ನ ಕುಟುಂಬದ ಜೊತೆ ವಾಸಿಸುತ್ತಿದ್ದರು. ಕೊರೋನವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಆರೋಗ್ಯರಕ್ಷಣೆ ಕೆಲಸಗಾರರು ಅನುಭವಿಸುತ್ತಿರುವ ವೇದನೆ ಮತ್ತು ಒತ್ತಡ ಅವರ ಆತ್ಮಹತ್ಯೆಗೆ ಕಾರಣವಾಗಬಹುದು ಎಂದು ಅವರ ಕುಟುಂಬ ಸದಸ್ಯರು, ಪೊಲೀಸರು ಮತ್ತು ವೈದ್ಯರು ಹೇಳುತ್ತಾರೆ.

‘‘ಅವಳು ತನ್ನ ಕೆಲಸವನ್ನು ಮಾಡಲು ಪ್ರಯತ್ನಿಸಿದಳು ಹಾಗೂ ಕೆಲಸವು ಅವಳನ್ನು ಕೊಂದಿತು’’ ಎಂದು ಅವರ ತಂದೆ ಫಿಲಿಪ್ ಬ್ರೀನ್ ‘ನ್ಯೂಯಾರ್ಕ್ ಟೈಮ್ಸ್’ಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News