ಉ.ಪ್ರ: 28 ಸಿಬ್ಬಂದಿಗಳಲ್ಲಿ ಕೋವಿಡ್-19 ಸೋಂಕು ಪತ್ತೆ, 10,000 ಪಿಪಿಇಗಳಿಗೆ ಪೊಲೀಸ್ ಇಲಾಖೆಯ ಬೇಡಿಕೆ

Update: 2020-04-30 16:38 GMT

ಲಕ್ನೋ, ಎ.30: ತನ್ನ 28 ಸಿಬ್ಬಂದಿಗಳಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆಯು 10,000ಕ್ಕೂ ಅಧಿಕ ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ)ಗಳಿಗಾಗಿ ಬೇಡಿಕೆಯನ್ನು ಸಲ್ಲಿಸಿದೆ. ಇದರ ಜೊತೆಗೆ ಅನಾರೋಗ್ಯದ ಇತಿಹಾಸವನ್ನು ಹೊಂದಿರುವ 55 ವರ್ಷಕ್ಕೂ ಹೆಚ್ಚಿನ ಪ್ರಾಯದ ಸಿಬ್ಬಂದಿಗಳಿಗೆ ಮುಂಚೂಣಿಯ ಕರ್ತವ್ಯದಿಂದ ದೂರವಿರುವಂತೆ ಸೂಚಿಸಿದೆ.

ಸ್ಥಳೀಯ ಮಟ್ಟದಲ್ಲಿ ಅಗತ್ಯ ಸುರಕ್ಷತಾ ಕಿಟ್‌ಗಳನ್ನು ಖರೀದಿಸುವಂತೆ ಡಿಜಿಪಿ ಹಿತೇಶಚಂದ್ರ ಅವಸ್ಥಿ ಅವರು ಜಿಲ್ಲಾ ಪೊಲೀಸ್ ವರಿಷ್ಠರಿಗೆ ನಿರ್ದೇಶ ನೀಡಿದ್ದಾರೆ.

ಗುರುವಾರದವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 28 ಪೊಲೀಸರಲ್ಲಿ ಕೊರೋನ ವೈರಸ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ನಾವೀಗಾಗಲೇ 10,000 ಪಿಪಿಇಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ಆದರೆ ಕೊರತೆಯಿಂದಾಗಿ ಕೇವಲ 3000ದಿಂದ 4,000 ಕಿಟ್‌ಗಳು ಪೂರೈಕೆಯಾಗಿವೆ. ಜಿಲ್ಲಾಮಟ್ಟದಲ್ಲಿ 6,000ಕ್ಕೂ ಅಧಿಕ ಕಿಟ್‌ಗಳನ್ನು ಖರೀದಿಸಲಾಗುತ್ತಿದೆ ಎಂದು ಅವಸ್ಥಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News