'ಲಾಕ್ ಡೌನ್ ಉಲ್ಲಂಘಿಸಿ ಮುಸ್ಲಿಮರಿಂದ ಸಾಮೂಹಿಕ ನಮಾಝ್' ಎಂದು ವೈರಲ್ ಆಗುತ್ತಿರುವ ಫೋಟೊ 2018ರದ್ದು

Update: 2020-05-03 09:50 GMT

ಹೊಸದಿಲ್ಲಿ: ನೂರಾರು ಮುಸ್ಲಿಮರು ನಮಾಝ್ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ‘ಲಾಕ್ ಡೌನ್ ಉಲ್ಲಂಘಿಸಿ ನಮಾಝ್’ ಎಂಬ ತಲೆಬರಹ ನೀಡಲಾಗಿದೆ.

ಲಾಕ್‍ ಡೌನ್ ನಡುವೆಯೂ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ 700 ಮಂದಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಎಂದು ಈ ಫೋಟೊವನ್ನು ಶೇರ್ ಮಾಡಿರುವ ಹಲವರು ಆರೋಪಿಸಿದ್ದಾರೆ. ವಿಜಯ್ ಅಜಯ್ ಎಂಬಾತ ಈ ಚಿತ್ರವನ್ನು ಪೋಸ್ಟ್ ಮಾಡಿ ಇದು ಎಪ್ರಿಲ್ 30ರ ಚಿತ್ರ ಎಂದು ಹೇಳಿಕೊಂಡಿದ್ದ. Alamy stock photo ಮತ್ತು ಜಯಾ ಮುರುಗನ್ ಅವರಿಗೆ ಚಿತ್ರದ ಕ್ರೆಡಿಟ್ ನೀಡಲಾಗಿತ್ತು.

ವಾಸ್ತವವೇನು?

Bjp Coimbatore Thondamuthur Assembly ಎಂಬ ಫೇಸ್‍ ಬುಕ್ ಪೇಜ್ ಕೂಡಾ ಇದನ್ನು ಪೋಸ್ಟ್ ಮಾಡಿತ್ತು. ಆದರೆ altnews.in ಇದರ ಹಿಂದಿನ ಸತ್ಯವನ್ನು ಬಯಲುಗೊಳಿಸಿದ್ದು, ಈ ಚಿತ್ರ ಉತ್ತರ ಪ್ರದೇಶದ ಅಲಹಾಬಾದ್‍ ನದ್ದು, 2018ರದ್ದು ಎಂದು ಸ್ಪಷ್ಟಪಡಿಸಿದೆ.

Alamy stock photo ಪ್ರಕಾರ ಇದು 2018ರ ಮೇ 17ರಂದು ಸೆರೆ ಹಿಡಿದ ಚಿತ್ರ. ಅಲಹಾಬಾದ್‍ನಲ್ಲಿ ರಮಝಾನ್ ತಿಂಗಳಲ್ಲಿ 2018ರಲ್ಲಿ ನಡೆದ ತರಾವೀಹ್ ನಮಾಝ್ ನ ಫೋಟೊ ಇದಾಗಿದೆ. 2018ರಲ್ಲಿ ಇದೇ ಶೀರ್ಷಿಕೆಯೊಂದಿಗೆ ಪ್ರಭಾತ್ ಕುಮಾರ್ ವರ್ಮಾ ಎಂಬವರು ಇದನ್ನು ಪೋಸ್ಟ್ ಮಾಡಿದ್ದರು ಎನ್ನುವುದು ಖಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News