ದಿಲ್ಲಿಯಲ್ಲಿ ಲಾಕ್‌ಡೌನ್ ಹಿಂಗೆದುಕೊಳ್ಳುವ ಸಮಯ ಬಂದಿದೆ:ಮುಖ್ಯಮಂತ್ರಿ ಕೇಜ್ರಿವಾಲ್

Update: 2020-05-03 17:00 GMT

ಹೊಸದಿಲ್ಲಿ, ಮೇ 3: ದೇಶವ್ಯಾಪಿ ಲಾಕಡೌನ್ ಮೂರನೇ ಹಂತವನ್ನು ಪ್ರವೇಶಿಸಲು ಸಜ್ಜಾಗಿರುವಂತೆ, ಲಾಕ್‌ಡೌನ್ ಅನ್ನು ಹಿಂದೆಗೆಯಲು ದಿಲ್ಲಿ ಸಿದ್ಧವಾಗಿದೆ ಎಂದು ರವಿವಾರ ಇಲ್ಲಿ ಹೇಳಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು,ಕೆಲವು ನಿರ್ಬಂಧಗಳೊಂದಿಗೆ ವಿನಾಯಿತಿ ನೀಡಲಾಗಿರುವ ಸೇವೆಗಳು ಮತ್ತು ಕೈಗಾರಿಕೆಗಳ ಪಟ್ಟಿಯನ್ನು ಪ್ರಕಟಿಸಿದರು.

‘ದಿಲ್ಲಿಯನ್ನು ಪುನರಾರಂಭಿಸುವ ಕಾಲವೀಗ ಬಂದಿದೆ. ಕೊರೋನ ವೈರಸ್ ಜೊತೆ ಬದುಕಲು ನಾವು ಸಿದ್ಧವಾಗಬೇಕಿದೆ ’ಎಂದು ಅವರು ಸಂಜೆ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.

ದಿಲ್ಲಿಯಲ್ಲಿ ಈವರೆಗೆ 4,122 ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದು,ಈ ಪೈಕಿ 1256 ರೋಗಿಗಳು ಚೇತರಿಸಿಕೊಂಡಿದ್ದಾರೆ. 64 ಜನರು ಮೃತಪಟ್ಟಿದ್ದಾರೆ.

ಲಾಕ್‌ಡೌನ್ ಅನ್ನು ಹಂತಹಂತವಾಗಿ ಹಿಂದೆಗೆದುಕೊಳ್ಳುವ ಸುಳಿವನ್ನು ನೀಡಿದ ಕೇಜ್ರಿವಾಲ್,ಕಂಟೈನ್‌ಮೆಂಟ್ ರೆನ್‌ಗಳನ್ನು ಹೊರತು ಪಡಿಸಿ ಇತರ ಸ್ಥಳಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲು ದಿಲ್ಲಿಯು ಸಿದ್ಧವಾಗಿದೆ. ದಿಲ್ಲಿಯು ಆಸ್ಪತ್ರೆಗಳು ಮತ್ತು ಕಿಟ್‌ಗಳಿಂದ ಸನ್ನದ್ಧವಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News