×
Ad

ಕೊರೋನ ವೈರಸ್ ಪರಿಣಾಮ: ವಾರನ್ ಬಫೆಟ್ ಉದ್ಯಮ ಸಮೂಹಕ್ಕೆ 3.78 ಲಕ್ಷ ಕೋಟಿ ರೂ. ನಷ್ಟ

Update: 2020-05-03 22:57 IST

ವಾಶಿಂಗ್ಟನ್, ಮೇ 3: ಕೊರೋನ ವೈರಸ್ ಸಾಂಕ್ರಾಮಿಕದ ಭೀಕರ ಹೊಡೆತಕ್ಕೆ ಸಿಲುಕಿರುವ ಅತಿ ಶ್ರೀಮಂತ ಉದ್ಯಮಿ ವಾರನ್ ಬಫೆಟ್ ಮಾಲೀಕತ್ವದ ಬರ್ಕ್‌ಶೈರ್ ಹ್ಯಾತ್‌ಅವೇ ಇಂಕ್ ಶನಿವಾರ ಸುಮಾರು 50 ಬಿಲಿಯ ಡಾಲರ್ (ಸುಮಾರು 3.78 ಲಕ್ಷ ಕೋಟಿ ರೂಪಾಯಿ) ನಷ್ಟವನ್ನು ತೋರಿಸಿದೆ. ಅದೇ ವೇಳೆ, ಅವರ ಒಡೆತನದ ಇತರ ಪ್ರಮುಖ ಉದ್ಯಮಗಳೂ ನಷ್ಟ ಅನುಭವಿಸುತ್ತಿವೆ ಎಂದು ಅವರ ಕಂಪೆನಿ ತಿಳಿಸಿದೆ.

ಅವರ ಮಾಲೀಕತ್ವದ 90ಕ್ಕೂ ಅಧಿಕ ಉದ್ಯಮಗಳ ಪೈಕಿ ಹೆಚ್ಚಿನವುಗಳು, ಕೋವಿಡ್-19ರಿಂದಾಗಿ ಲಘು ಪ್ರಮಾಣದಿಂದ ಹಿಡಿದು ಗಂಭೀರ ಪ್ರಮಾಣದವರೆಗೆ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುತ್ತಿವೆ ಎಂದು ಬರ್ಕ್‌ಶೈರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News