ನಾನು ಖಂಡಿತವಾಗಿಯೂ ಭಾರತದ ಬೌಲಿಂಗ್ ಕೋಚ್ ಆಗಲು ಬಯಸುವೆ ಎಂದ ಅಖ್ತರ್

Update: 2020-05-05 07:04 GMT

ಹೊಸದಿಲ್ಲಿ,ಮೇ 5: ಒಂದು ವೇಳೆ ನನಗೆ ಆಫರ್ ನೀಡಿದರೆ ಭಾರತದ ಬೌಲಿಂಗ್ ಕೋಚ್ ಆಗಲು ಆಸಕ್ತಿ ತೋರುವೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶುಐಬ್ ಅಖ್ತರ್ ಹೇಳಿದ್ದಾರೆ.

 ಭವಿಷ್ಯದಲ್ಲಿ ಭಾರತದ ಬೌಲಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಖ್ತರ್,ಖಂಡಿತವಾಗಿಯೂ ನಾನು ತಯಾರಿದ್ದೇನೆ. ಯುವ ಬೌಲರ್‌ಗಳಿಗೆ ನಾನು ಕಲಿತ ಜ್ಞಾನವನ್ನು ಪಸರಿಸಲು ಬಯಸುವೆ. ಇದು ನನ್ನ ಕೆಲಸ. ಹೆಚ್ಚು ಆಕ್ರಮಣಕಾರಿ ಹಾಗೂ ವೇಗದ ಬೌಲರ್‌ಗಳನ್ನು ತಯಾರಿಗೊಳಿಸುವ ಸಾಮರ್ಥ್ಯ ನನಗಿದೆ ಎಂದರು.

ಮೊದಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದ ಅಖ್ತರ್, ಕೆಕೆಆರ್ ತಂಡದ ಕೋಚ್ ಆಗುವ ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News