“ಪ್ರಧಾನಿ ಕಚೇರಿಯ ಐವರಿಗೆ ಅನಾರೋಗ್ಯ”

Update: 2020-05-06 18:49 GMT

ಹೊಸದಿಲ್ಲಿ: ಆರೋಗ್ಯ ಸೇತು ಆ್ಯಪ್ ನಲ್ಲಿ ಲೋಪಗಳಿವೆ ಎಂದು ಆರೋಪಿಸಿದ್ದ ಫ್ರೆಂಚ್ ಹ್ಯಾಕರ್ ಇಲಿಯಟ್ ಆಲ್ಡರ್ಸನ್ ಆ್ಯಪ್ ಕುರಿತ ಇನ್ನಷ್ಟು ಲೋಪಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ ಎಂದು cnbctv18.com ವರದಿ ಮಾಡಿದೆ.

ಆ್ಯಪ್ ನಿಂದ ಪಡೆದುಕೊಂಡಂತಹ ಮಾಹಿತಿಯೊಂದು ತಾನು ಹಂಚಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಇದೇ ಸಂದರ್ಭ ಅವರು ಪ್ರಧಾನಿ ಕಚೇರಿಯಲ್ಲಿ 5 ಮಂದಿ ಅನಾರೋಗ್ಯಕ್ಕೀಡಾಗಿದ್ದಾರೆ ಎಂದೂ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಆ್ಯಂಡರ್ಸನ್ “ನಿನ್ನೆ ಪ್ರಧಾನಿ ಕಚೇರಿಯಲ್ಲಿ 8 ಮಂದಿ ಅನಾರೋಗ್ಯಕ್ಕೀಡಾಗಿದ್ದಾರೆ. 2 ಭಾರತೀಯ ಸೇನೆಯ ಮುಖ್ಯ ಕಚೇರಿಯಲ್ಲಿ ಅನಾರೋಗ್ಯಕ್ಕೀಡಾಗಿದ್ದಾರೆ. ಭಾರತೀಯ ಸಂಸತ್ ನಲ್ಲಿ ಒಬ್ಬರು ಸೋಂಕಿಗೊಳಗಾಗಿದ್ದಾರೆ. ಗೃಹ ಕಚೇರಿಯ ಮೂವರು ಸೋಂಕಿಗೊಳಗಾಗಿದ್ದಾರೆ” ಎಂದು ಆರೋಪಿಸಿದ್ದಾರೆ.

ಆರೋಗ್ಯ ಸೇತು ಆ್ಯಪ್ ನಲ್ಲಿ ಹಲವು ತಾಂತ್ರಿಕ, ಭದ್ರತಾ ಲೋಪಗಳಿವೆ ಎಂದು ಮಂಗಳವಾರ ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ಸರಕಾರ ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News