×
Ad

ಕೊರೋನ ವೈರಸ್ ಸೋಂಕಿತರಲ್ಲಿ ಹೊಸ ಲಕ್ಷಣಗಳು ಪತ್ತೆ !

Update: 2020-05-08 23:13 IST

ಪ್ಯಾರಿಸ್, ಮೇ 8: ಪ್ರತಿ ವಾರವೂ ಕೊರೋನ ವೈರಸ್ ಲಕ್ಷಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಸಾಮಾನ್ಯ ಫ್ಲೂ ಜ್ವರದ ಲಕ್ಷಣಗಳಾದ ಶೀತ, ತಲೆನೋವು ಮತ್ತು ಜ್ವರದಿಂದ ಆರಂಭಗೊಂಡ ಸಾಂಕ್ರಾಮಿಕವು ಕಳೆದ ಮೂರು ತಿಂಗಳ ಅವಧಿಯಲ್ಲಿ ತನ್ನ ಲಕ್ಷಣಗಳನ್ನು ವೃದ್ಧಿಸಿಕೊಳ್ಳುತ್ತಿದೆ. ಈಗ ಅದರ ಲಕ್ಷಣಗಳು ಮೆದುಳಿನಿಂದ ಹಿಡಿದು ಮೂತ್ರಪಿಂಡಗಳು ಸೇರಿದಂತೆ ದೇಹದ ಎಲ್ಲ ಅಂಗಗಳ ಮೇಲೆಯೂ ಅದು ತನ್ನ ಪ್ರಭಾವವನ್ನು ಬೀರಿರುವಂತೆ ಕಾಣುತ್ತಿದೆ.

ನೂತನ ಕೊರೋನ ವೈರಸ್ ಮಾನವ ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲೆ ಅತ್ಯಂತ ಹೆಚ್ಚಿನ ಒತ್ತಡವನ್ನು ಹೇರಬಹುದಾಗಿದೆ. ಹೆಚ್ಚಿನ ವೈರಸ್‌ಗಳು ಎರಡು ವಿಧಗಳಲ್ಲಿ ರೋಗ ಉಂಟು ಮಾಡಬಹುದಾಗಿದೆ ಎಂದು ಕೆಂಟ್ ವಿಶ್ವವಿದ್ಯಾನಿಲಯದಲ್ಲಿ ವೈರಾಣು ಶಾಸ್ತ್ರದ ಹಿರಿಯ ಉಪನ್ಯಾಸಕರಾಗಿರುವ ಜೆರೆಮಿ ರೋಸ್‌ಮನ್ ಹೇಳುತ್ತಾರೆ.

ವೈರಸ್‌ಗಳು ಸೃಷ್ಟಿಯಾಗುವ ಸ್ಥಳಗಳಲ್ಲಿನ ಅಂಗಾಂಶಗಳು ನಾಶಗೊಳ್ಳಬಹುದು ಅಥವಾ ರೋಗದ ವಿರುದ್ಧದ ಹೋರಾಟದಲ್ಲಿ ತೊಡಗುವುದರಿಂದ ರೋಗನಿರೋಧಕ ವ್ಯವಸ್ಥೆಯಲ್ಲಿ ಅಡ್ಡ ಪರಿಣಾಮಗಳು ಕಾಣಿಸಿಕೊಂಡು ಹಾನಿ ಸಂಭವಿಸಬಹುದು ಎಂದು ಅವರು ಹೇಳುತ್ತಾರೆ.

ಇತ್ತೀಚಿನ ವಾರಗಳಲ್ಲಿ ನ್ಯೂಯಾರ್ಕ್, ಲಂಡನ್ ಮತ್ತು ಪ್ಯಾರಿಸ್‌ಗಳಲ್ಲಿ ಊತ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಹಲವು ಡಝನ್ ಮಕ್ಕಳಲ್ಲಿ ಕೋವಿಡ್-19 ಪತ್ತೆಯಾಗಿದೆ ಎಂದು ರೋಸ್‌ಮನ್ ಹೇಳಿದರು. ಈ ಲಕ್ಷಣಗಳು ಹಿಂದೆ ಪತ್ತೆಯಾಗಿರಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News