ಅಜಿತ್‌ ಜೋಗಿ ದೇಹಸ್ಥಿತಿ ಗಂಭೀರ

Update: 2020-05-12 18:37 GMT

 ರಾಯ್‌ಪುರ,ಮೇ12: ಚತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ದೇಹಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾರೆಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಂಗಳವಾರ ತಿಳಿಸಿದ್ದಾರೆ..

74 ವರ್ಷ ವಯಸ್ಸಿನ ಅಜಿತ್ ಜೋಗಿ ಅವರ ‘ನರವ್ಯೂಹದ ಚಟುವಟಿಕೆಗಳು’ ಬಹುತೇಕ ಸ್ಥಗಿತಗೊಂಡಿದ್ದು, ಕೋಮಾಸ್ಥಿತಿಯಲ್ಲಿದ್ದಾರೆ. ವೈದ್ಯರು ಜೋಗಿಯವರಿಗೆ ಆಡಿಯೋ ಥೆರಪಿಯನ್ನು ಆರಂಭಿಸಿದ್ದು ಅವರ ಕಿವಿಗಳಿಗೆ ಇಯರ್‌ಫೋನ್‌ಗಳನ್ನು ಅಳವಡಿಸಿ ಅವರ ಅಚ್ಚುಮೆಚ್ಚಿನ ಹಾಡುಗಳನ್ನು ಕೇಳಿಸುತ್ತಿದ್ದಾರೆ.

ಹೃದಯಾಘಾತ ಹಾಗೂ ಉಸಿರಾಟದ ತೊಂದರೆಗಾಗಿ ಅಜಿತ್ ಜೋಗಿ ಅವರನ್ನು ಮೇ 9ರಂದು ರಾಯ್‌ಪುರದ ಶ್ರೀನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಹಿ ಹುಣಸೆಹುಳಿಯನ್ನು ಸೇವಿಸುತ್ತಿದ್ದಾಗ ಅದರ ಬೀಜ ಅವರ ಶ್ವಾಸನಾಳದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಅವರಿಗೆ ಉಸಿರಾಟದ ತೊಂದರೆ ಹಾಗೂ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

 ಕೋಮಾಸ್ಥಿತಿಯಲ್ಲಿರುವ ಜೋಗಿ ಅವರ ರಕ್ತದ ಒತ್ತಡ ಹಾಗೂ ಮೂತ್ರಕೋಶದ ಕಾರ್ಯನಿರ್ವಹಣೆ ನಿಯಂತ್ರಣದಲ್ಲಿದೆ ಎಂದು ಜೋಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News