ಕೊರೋನ ವೈರಸ್ ನಿವಾರಣೆಗಾಗಿ ಮೇ 14ರಂದು ಎಲ್ಲಾ ಧರ್ಮಗಳ ಜನರು ಪ್ರಾರ್ಥನೆ, ಉಪವಾಸಕ್ಕಾಗಿ ಒಂದಾಗಿ

Update: 2020-05-13 16:56 GMT

ವ್ಯಾಟಿಕನ್ ಸಿಟಿ: ಕೊರೋನ ವೈರಸ್ ಜಗತ್ತಿನಾದ್ಯಂತ ಕೋಲಾಹಲ ಎಬ್ಬಿಸಿರುವ ನಡುವೆ ಈ ಬಿಕ್ಕಟ್ಟಿನಿಂದ ಶೀಘ್ರ ಹೊರಬರುವುದಕ್ಕಾಗಿ ಜಗತ್ತಿನಾದ್ಯಂತ ಎಲ್ಲಾ ಧರ್ಮಗಳ ಜನರು ಒಟ್ಟಾಗಿ ಪ್ರಾರ್ಥಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

“ಮೇ 14ರಂದು ಎಲ್ಲಾ ಧರ್ಮಗಳ ಜನರು ಒಂದು ದಿನದ ಪ್ರಾರ್ಥನೆ, ಉಪವಾಸ ಮತ್ತು ದಾನದ ಕೆಲಸಗಳಿಗಾಗಿ ಆಧ್ಯಾತ್ಮಿಕವಾಗಿ ಒಂದಾಗಬೇಕು. ಕೊರೋನ ವೈರಸ್ ಬಿಕ್ಕಟ್ಟಿನಿಂದ ಹೊರಬರಲು ದೇವರಲ್ಲಿ ಪ್ರಾರ್ಥಿಸಬೇಕು. ಪ್ರಾರ್ಥನೆಗೆ ಎಲ್ಲಾ ಮೌಲ್ಯಗಳಿದ್ದು,  ಮೇ 14ರಂದು ಎಲ್ಲಾ ಧರ್ಮಗಳ ಜನರು ಒಂದಾಗಬೇಕು, ಪ್ರಾರ್ಥಿಸಬೇಕು. ಎಲ್ಲಾ ಧರ್ಮಗಳ ಜನರು ಒಂದಾಗಿ ಪ್ರಾರ್ಥಿಸಬೇಕು ಎಂದು ಹ್ಯೂಮನ್ ಫ್ರಾಟರ್ನಿಟಿಯ ಉನ್ನತ ಸಮಿತಿ ನೀಡಿದ್ದ ಕರೆಯನ್ನು ತಾನು ಸ್ವೀಕರಿಸಿದ್ದೇನೆ” ಎಂದವರು ತನ್ನ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News