ಸಾಂಕ್ರಾಮಿಕದ ಹೊತ್ತಿನಲ್ಲೂ ಇರಾನ್‌ನಿಂದ ಭಯೋತ್ಪಾದನೆಗೆ ಪೋಷಣೆ: ಮೈಕ್ ಪಾಂಪಿಯೊ ಆರೋಪ

Update: 2020-05-13 17:31 GMT

ಜೆರುಸಲೇಮ್, ಮೇ 13: ಮಧ್ಯ ಏಶ್ಯದಲ್ಲೇ ಅತಿ ಭೀಕರ ಕೊರೋನ ವೈರಸ್ ದಾಳಿಗೆ ತುತ್ತಾಗಿರುವ ಹೊರತಾಗಿಯೂ, ಭಯೋತ್ಪಾದನೆಯನ್ನು ಪೋಷಿಸಲು ಇರಾನ್ ತನ್ನ ಸಂಪನ್ಮೂಲಗಳನ್ನು ಬಳಸುತ್ತಿದೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಬುಧವಾರ ಆರೋಪಿಸಿದ್ದಾರೆ.

ಈ ಸಾಂಕ್ರಾಮಿಕದ ಹೊತ್ತಿನಲ್ಲೂ, ಆಯತುಲ್ಲಾ ಆಡಳಿತದ ಸಂಪನ್ಮೂಲಗಳನ್ನು ಜಗತ್ತಿನಾದ್ಯಂತ ಭಯೋತ್ಪಾದನೆಯನ್ನು ಪೋಷಿಸಲು ಬಳಸಲಾಗುತ್ತಿದೆ. ಆದರೆ ಅಲ್ಲಿನ ಜನರು ನರಳುತ್ತಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮಾತುಕತೆ ನಡೆಸುವ ಮುನ್ನ ಜೆರುಸಲೇಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಂಪಿಯೊ ಹೇಳಿದರು.

ಇದು ಆ ದೇಶದ ನಾಯಕತ್ವವನ್ನು ವಹಿಸಿರುವ ಜನರ ವ್ಯಕ್ತಿತ್ವವನ್ನು ಬಯಲಿಗೆಳೆದಿದೆ ಎಂದರು.

ಕೊರೋನ ವೈರಸ್ ಸಾಂಕ್ರಮಿಕದ ನಡುವೆ, ಪಾಂಪಿಯೊ ವಿದೇಶವೊಂದಕ್ಕೆ ಭೇಟಿ ನೀಡಿರುವುದು ಎರಡು ತಿಂಗಳಲ್ಲೇ ಇದು ಮೊದಲ ಬಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News