×
Ad

ಕೊರೋನ ವೈರಸ್ ನೈಸರ್ಗಿಕವಲ್ಲ, ಲ್ಯಾಬ್ ನ ಸೃಷ್ಟಿ: ಕೇಂದ್ರ ಸಚಿವ ಗಡ್ಕರಿ

Update: 2020-05-13 23:32 IST

ಹೊಸದಿಲ್ಲಿ: ಕೊರೋನ ವೈರಸ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಣ್ಣ ಉದ್ಯಮಗಳಿಗಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವ ಪ್ಯಾಕೇಜ್ ಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸಕಾರಾತ್ಮಕತೆಯನ್ನು ಸೃಷ್ಟಿಸುವುದು ಸವಾಲು ಎಂದರು.

“ನಾವು ಕೊರೋನಾದೊಂದಿಗೆ ಬದುಕುವ ಕಲೆಯನ್ನು ಕಲಿಯಬೇಕು. ಇದು ನೈಸರ್ಗಿಕ ವೈರಸ್ ಅಲ್ಲ. ಇದು ಕೃತಕ ವೈರಸ್. ಲ್ಯಾಬ್ ನಿಂದ ವೈರಸ್ ಸೃಷ್ಟಿಸಲಾಗಿದೆ. ದೇಶಗಳು ಲಸಿಕೆಯನ್ನು ಕಂಡುಹಿಡಿಯಲು ಪ್ರಯತ್ನ ಪಡುತ್ತಿವೆ” ಎಂದು ಎನ್ ಡಿಟಿ ಜೊತೆ ಮಾತನಾಡುತ್ತಾ ಗಡ್ಕರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News