ಬ್ರಿಟನ್: ಕೊರೋನ ವಿರುದ್ಧ ಹೋರಾಡಿ ಮಡಿದ ಭಾರತೀಯ ವೈದ್ಯೆ

Update: 2020-05-14 03:39 GMT

ಲಂಡನ್ : ಭಾರತ ಮೂಲದ ವೈದ್ಯೆಯೊಬ್ಬರು ಕೊರೋನ ಸೋಂಕಿನ ವಿರುದ್ಧ ಹೋರಾಡಿ ಮೃತಪಟ್ಟಿರುವ ಘಟನೆ ಈಶಾನ್ಯ ಇಂಗ್ಲೆಂಡ್‌ನಲ್ಲಿ ನಡೆದಿದೆ.

ಕೇರಳ ಮೂಲದ ಡಾ.ಪೂರ್ಣಿಮಾ ನಾಯರ್ ಅವರು ಕೌಂಟಿ ದುರ್ಹಮ್‌ನ ಬಿಷಪ್ ಆಕ್ಲೆಂಡ್ ಎಂಬಲ್ಲಿನ ಸ್ಟೇಷನ್ ವ್ಯೂ ಮೆಡಿಕಲ್ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಕೋವಿಡ್-19 ವಿರುದ್ಧದ ಸುಧೀರ್ಘ ಹೋರಾಟದ ಬಳಿಕ ನಾರ್ಥ್ ತೀಸ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬ್ರಿಟನ್‌ನಲ್ಲಿ ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಮೃತಪಟ್ಟ 10ನೇ ವೈದ್ಯೆ ಇವರಾಗಿದ್ದಾರೆ. ದೇಶದಲ್ಲಿ ಈ ಮಾರಕ ಸಾಂಕ್ರಾಮಿಕ ಈಗಾಗಲೇ 32 ಸಾವಿರಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ.

ಡಾ.ಪೂರ್ಣಿಮಾ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದ ಅಪಾರ ಶೋಕ ಸಂದೇಶಗಳು ಬಂದಿವೆ. ಕಳೆದ ಕೆಲ ದಿನಗಳಿಂದ ಅವರು ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದರು.

ನಾಯರ್ ಅವರಿಂದ ಚಿಕಿತ್ಸೆ ಪಡೆದು ಗುಣಮುಖರಾದ ಹಲವು ರೋಗಿಗಳು ಹಾಗೂ ಅವರ ಸಂಬಂಧಿಕರು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಡಾ. ಪೂರ್ಣಿಮಾ ಅವರ ಸೇವೆಯ ಗುಣಗಾನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News