ವುಹಾನ್‌ನಲ್ಲಿ ಮತ್ತೆ ತಲೆಯೆತ್ತಿದ ಸಾಂಕ್ರಾಮಿಕ

Update: 2020-05-15 15:20 GMT
ಸಾಂದರ್ಭಿಕ ಚಿತ್ರ

ವುಹಾನ್ (ಚೀನಾ), ಮೇ 15: ನೂತನ-ಕೊರೋನ ವೈರಸ್ ಸಾಂಕ್ರಾಮಿಕ ಸ್ಫೋಟಗೊಂಡ ಚೀನಾದ ವುಹಾನ್ ನಗರದಲ್ಲಿ ಹೊಸದಾಗಿ ಸೋಂಕು ಪ್ರಕರಣಗಳು ವರದಿಯಾಗಿರುವಂತೆಯೇ, ಭಯಗೊಂಡ ಜನರು ತಮ್ಮನ್ನು ಪರೀಕ್ಷೆಗೆ ಒಳಪಡಿಸಲಿಕ್ಕಾಗಿ ಸರದಿ ಸಾಲುಗಳಲ್ಲಿ ನಿಂತಿದ್ದಾರೆ.

ಜನರನ್ನು ಹೊಸದಾಗಿ ತಪಾಸಣೆಗೆ ಒಳಪಡಿಸುವುದಕ್ಕಾಗಿ ಪಾರ್ಕಿಂಗ್ ಸ್ಥಳಗಳು, ಉದ್ಯಾನಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಡೇರೆಗಳನ್ನು ಹಾಕಲಾಗಿದೆ. ಜನರು ಸುರಕ್ಷಿತ ಅಂತರ ಕಾಯ್ದುಕೊಂಡು ಸರದಿ ಸಾಲುಗಳಲ್ಲಿ ನಿಂತಿದ್ದಾರೆ.

ಮಾರಕ ಸಾಂಕ್ರಾಮಿಕವು 2019ರ ಕೊನೆಯಲ್ಲಿ ವುಹಾನ್‌ನಲ್ಲಿ ಕಾಣಿಸಿಕೊಂಡಿತು. ಬಳಿಕ ಸೋಂಕು ಹರಡುವಿಕೆಯನ್ನು ನಿಯಂತಿಸುವುದಕ್ಕಾಗಿ ಜನವರಿ 23ರಂದು ಸರಕಾರವು ವುಹಾನ್‌ನಲ್ಲಿ ಬೀಗಮುದ್ರೆ ಘೋಷಿಸಿತು. ಆ ಮೂಲಕ ಅಲ್ಲಿನ ವ್ಯಾಪಾರ ಮತ್ತು ಉದ್ದಿಮೆಗಳನ್ನು ದೇಶದ ಇತರ ಭಾಗಗಳಿಂದ ಪ್ರತ್ಯೇಕಿಸಿತು ಹಾಗೂ ಜನರು ಮನೆಯಲ್ಲೇ ಇರುವಂತೆ ನೋಡಿಕೊಂಡಿತು.

ಬಳಿಕ ಎಪ್ರಿಲ್ ತಿಂಗಳ ಮೊದಲ ಭಾಗದಲ್ಲಿ ಚೀನಾವು ವುಹಾನ್ ನಗರದಲ್ಲಿನ ಬೀಗಮುದ್ರೆಯನ್ನು ತೆರವುಗೊಳಿಸಿತು. ಆದರೆ, ಕಳೆದ ವಾರಾಂತ್ಯದಲ್ಲಿ ಸೋಂಕಿನ ಹಲವು ಪ್ರಕರಣಗಳು ಸ್ಥಳೀಯರಲ್ಲಿ ಕಾಣಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News