ಕೋವಿಡ್-19: ಉ.ಪ್ರದೇಶದಲ್ಲಿ ಹೊಸದಾಗಿ ನಾಲ್ಕು ಸಾವುಗಳು; 43 ಪ್ರಕರಣಗಳು ದಾಖಲು

Update: 2020-05-15 17:38 GMT

ಲಕ್ನೋ, ಮೇ 15: ಶುಕ್ರವಾರ ಉತ್ತರ ಪ್ರದೇಶದಲ್ಲಿ ಹೊಸದಾಗಿ 43 ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಈವರೆಗೆ ದಾಖಲಾದ ಪ್ರಕರಣಗಳ ಒಟ್ಟು ಸಂಖ್ಯೆ 3,945ಕ್ಕೆ ತಲುಪಿದೆ. ಸೋಂಕಿಗೆ ಇನ್ನೂ ನಾಲ್ವರು ಬಲಿಯಾಗಿದ್ದು,ಮೃತರ ಒಟ್ಟು ಸಂಖ್ಯೆ 92ಕ್ಕೇರಿದೆ.

ರಾಜ್ಯದ 75 ಜಿಲ್ಲೆಗಳಿಂದ ವರದಿಯಾಗಿರುವ 3,945 ಒಟ್ಟು ಪ್ರಕರಣಗಳ ಪೈಕಿ 1,773 ಪ್ರಕರಣಗಳು ಸಕ್ರಿಯವಾಗಿದ್ದು, 2,080 ಜನರು ಗುಣಮುಖರಾಗಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಅಮಿತ ಮೋಹನ ಪ್ರಸಾದ್ ತಿಳಿಸಿದರು.

ಅತ್ಯಂತ ಹೆಚ್ಚಿನ ಸಾವುಗಳು ಆಗ್ರಾ (24)ದಲ್ಲಿ ಸಂಭವಿಸಿದ್ದು,ನಂತರದ ಸ್ಥಾನಗಳಲ್ಲಿ ಮೀರತ್(15) ಮತ್ತು ಮೊರಾದಾಬಾದ್ (9) ಇವೆ. ಗುರುವಾರ ರಾಜ್ಯಾದ್ಯಂತ 4,878 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಪ್ರಸಾದ್ ತಿಳಿಸಿದರು. ಉ.ಪ್ರದೇಶದ ಕೋವಿಡ್-19 ರೋಗಿಗಳಲ್ಲಿ ಪುರುಷರು ಶೇ.74.6ರಷ್ಟಿದ್ದರೆ ಮಹಿಳೆಯರ ಪ್ರಮಾಣ ಶೇ, 25.4ರಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News